Ticker

6/recent/ticker-posts

Ad Code

ಇತಿಹಾಸ ಪ್ರಸಿದ್ಧ ಕೊಟ್ಟಿಯೂರು ವೈಶಾಖೋತ್ಸವ ಮೇ 30ರಿಂದ ಆರಂಭ – ಮಹಿಳೆಯರಿಗೆ ಜೂನ್‌ 20ರವರೆಗೆ ಮಾತ್ರ ಪ್ರವೇಶ


ಕಣ್ಣೂರು: ದಕ್ಷಿಣ ಕಾಶಿ ಖ್ಯಾತಿಯ ಕೊಟ್ಟಿಯೂರು ಶಿವ ಕ್ಷೇತ್ರದ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಕ್ತರಿಗೆ ದೇವರ ದರ್ಶನ ಮೇ 30ರಿಂದ ಶುರುವಾಗಲಿದೆ. ಕೊಟ್ಟಿಯೂರು ದೇವರ ದರ್ಶನ ನಿನ್ನೆಯಿಂದಲೇ ಶುರು ಎಂದು ಕರ್ನಾಟಕದಿಂದ ಹಲವಾರು ಭಕ್ತರು ಕೊಟ್ಟಿಯೂರು ತಲುಪಿದ್ದು, ದೇವರ ದರ್ಶನವಿಲ್ಲದೆ ನಿರಾಶರಾಗಿ ಮರಳಬೇಕಾಗಿ ಬಂದಿದೆ.  ಕರ್ನಾಟಕದಿಂದ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದವರು ದೇವರ ದರ್ಶನಕ್ಕೆ ಅವಕಾಶ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕೊಟ್ಟಿಯೂರು ವೈಶಾಖ ಮಹೋತ್ಸವದ ಹಿನ್ನೆಲೆಯಲ್ಲಿ ದೇವರ ದರ್ಶನ ಈ ವರ್ಷ ಮೇ 30ರ ಮಧ್ಯರಾತ್ರಿಯಿಂದ ಶುರುವಾಗುತ್ತದೆ. ಸ್ತ್ರೀಯರಿಗೆ ಜೂನ್‌ 20ರ ಮಧ್ಯಾಹ್ನದವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಜೂನ್‌ 24ರಂದು ಈ ವರ್ಷದ ಕೊನೆಯ ಪೂಜೆ ನಡೆಯಲಿದೆ ಎಂದು ಹೇಳಿದ್ದಾರೆ. ದಕ್ಷ ಯಾಗ ನಡೆಸಿದ ಪುರಾಣ ಇತಿಹಾಸವಾದ ಪ್ರಕೃತಿ ರಮಣೀಯ ಕ್ಷೇತ್ರಕ್ಕೆ ಭಕ್ತಾದಿಗಳು ಕಳೆದ ವರ್ಷದ ವೈಶಾಖೋತ್ಸವ ವೇಳೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಬಾರೀ ತೀವ್ರ ವ್ಯವಸ್ಥೆ ಹಾಗೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments