Ticker

6/recent/ticker-posts

Ad Code

ಕೇರಳ ರಾಜ್ಯದ ಖಜಾನೆಯಲ್ಲಿ ಪಿಣರಾಯಿ ಸರಕಾರದಿಂದ 5,429 ಕೋಟಿ ರೂ.ಉಳಿತಾಯ : ಆರ್‌ಟಿಐ ಮಾಹಿತಿ ಬಹಿರಂಗ

 


ತಿರುವನಂತಪುರ: ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ಸ ರ್ಕಾರ  ಬೊಕ್ಕಸದಲ್ಲಿ  5,429 ಕೋಟಿ ರೂ.ಉಳಿತಾಯ ಇರಿಸಿ ಆಡಳಿತದಿಂದ ಕೆಳಗಿಳಿದಿದೆ ಎಂದು ಈ ತಿಂಗಳ ಮೊದಲ ವರೆಗಿನ ಅಂಕಿ ಅಂಶ. ಹಣಕಾಸು ಇಲಾಖೆಯ ಆರ್‌ಟಿಐ ಮಾಹಿತಿ ಪ್ರಕಾರ ಲಭ್ಯವಾಗಿದೆ.  ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಲು ಮುಂದಾಗಿರುವಾಗಲೇ ಬೊಕ್ಕಸದಲ್ಲಿರುವ ಹಣದ ಲೆಕ್ಕಾಚಾರ ಹೊರಬಿದ್ದಿದೆ.

ಕೇರಳ ದಿವಾಳಿ ರಾಜ್ಯವಾಗಿದ್ದು, ರಾಜ್ಯ ಸಂಪೂರ್ಣ ಆರ್ಥಿಕವಾಗಿ ಹದಗೆಟ್ಟಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಆರೋಪಿಸಿದ್ದರು. ಆಂಟನಿ ಹೇಳಿಕೆಯ ನಂತರ ಕೆಎನ್ ಬಾಲಗೋಪಾಲ್ ಅವರು ಪ್ರತಿಕ್ರಿಯಿಸಿ   ಖಜಾನೆ ಖಾಲಿಯಾಗಿಲ್ಲ 6000 ಕೋಟಿ ಬಿಟ್ಟು ಹೋಗಿದೆ ಎಂದು ಪ್ರತಿಕ್ರಿಯಿಸಿದ್ದರು. ಖಜಾನೆಯಲ್ಲಿ ಹಣವಿದ್ದ ಕಾರಣ ಖಾತ್ರಿಗಳನ್ನು ಜಾರಿಗೆ ತರಬಹುದು ಎಂದು ಹೇಳಿದ್ದರು. ಇದೇ ವೇಳೆ ಮಾಹಿತಿ ಹಕ್ಕು ದಾಖಲೆಯೂ ಹೊರಬಿದ್ದಿದೆ.

Post a Comment

0 Comments