Ticker

6/recent/ticker-posts

Ad Code

ಯಕ್ಷಗುರು ಬೆಳ್ಳಾರೆ ವಾಸುದೇವ ರೈಯವರ ಸುಪುತ್ರ ಬೆಂಗಳೂರಿನ ವಾಹನಾಪಘಾತದಲ್ಲಿ ಮೃತ್ಯು

ಬೆಳ್ಳಾರೆ : ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗದಲ್ಲಿದ್ದ ಬೆಳ್ಳಾರೆ ನಿವಾಸಿ ಸೂರಜ್ ರೈ (27 ವ) ಅವರು ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮೇ 15ರಂದು ರಾತ್ರಿ ಬೆಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕುಣಿಗಲ್ ಸಮೀಪ ಕೋಳಿ ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಕುಣಿಗಲ್‌ನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ 22 ರಂದು ಮುಂಜಾನೆ ಮೃತಪಟ್ಟಿದ್ದಾರೆ.ಇವರ ತಂದೆ ಯಕ್ಷಗುರುಗಳಾದ  ವಾಸುದೇವ ರೈ, ತಾಯಿ ಶರ್ಮಿಳಾ ರೈ, ಪತ್ನಿ ಸ್ನೇಹ, ಸಹೋದರ ಸುದೀಪ್ ರೈ ಅವರನ್ನು ಅಗಲಿದ್ದಾರೆ.

Post a Comment

0 Comments