ಬದಿಯಡ್ಕ : ನೆಕ್ರಾಜೆ ದಿ. ಕಣ್ಣಪ್ಪಾಚಾರ್ಯರ ಧರ್ಮಪತ್ನಿ ಚಂದ್ರಾವತಿ ಆಚಾರ್ಯ(87) ಅಲ್ಪ ಕಾಲದ ಅಸೌಖ್ಯದಿಂದ ಸೊಮವಾರ ರಾತ್ರಿ ನಿಧನರಾದರು. ಮೃತರ ಪತಿ ಈ ಹಿಂದೆಯೇ ನಿಧನರಾಗಿದ್ದು ಮಕ್ಕಳಾದ ಪುರುಷೋತ್ತಮ ಆಚಾರ್ಯ, ಸುಬ್ರಹ್ಮಣ್ಯ, ಸುರೇಶ, ಗಣೇಶ, ದಿನೇಶ, ವೇಣುಗೋಪಾಲ, ಗಾಯತ್ರಿ, ಸಹೋದರಿ ಭೂದೇವಿ ಹಾಗೂಅಳಿಯ ಭವಾನಿಶಂಕರ ಆಚಾರ್ಯ ಸೊಸೆಯವರಾದ ಪುಷ್ಪಲತ, ರೇಣುಕ, ಭುವನೇಶ್ವರಿ, ಕವಿತಾ, ಸುಮ, ಆಶಲತಾ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ನಿಧನಕ್ಕೆ ಶ್ರೀ ಕಾಳಿಕಾಂಬ ಮಠ ಮಧೂರು, ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ(ರಿ) ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಕಾಸರಗೋಡು ಇದರ ಪದಾಧಿಕಾರಿಗಳು ಸರ್ವ ಸದಸ್ಯರು ವಿಶ್ವಕರ್ಮ ಸಮಾಜ ಬಾಂಧವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸೊಸೆ, ಅಳಿಯ ಹಾಗೂ ಮೊಮ್ಮಕ್ಕಳು, ಅಪಾರ ಬಂಧುಬಳಗವನ್ನಗಲಿದ್ದಾರೆ.

0 Comments