Ticker

6/recent/ticker-posts

Ad Code

ಕೂಲಿ ಕಾರ್ಮಿಕ ನಿದ್ದೆಯಲ್ಲಿ ಸಾವು

 

ನೀರ್ಚಾಲು :  ಕೂಲಿ ಕಾರ್ಮಿಕೋರ್ವ ನಿದ್ರೆಯಲ್ಲಿಯೇ ಸಾವನ್ನಪ್ಪಿದ ಘಟನೆ ಬದಿಯಡ್ಕ ಪಂಚಾಯತ್‌ನ ಪುದುಕ್ಕೊಳಿಯಲ್ಲಿ ನಡೆದಿದೆ. ಇಲ್ಲಿನ ಸುರೇಶ್ (42) ಈ ರೀತಿ ಮೃತಪಟ್ಟ ಯುವಕ. ನಿನ್ನೆ ರಾತ್ರಿ (ಗುರುವಾರ) ಊಟ ಮಾಡಿ ನಿದ್ರೆಗೆ ಜಾರಿದ್ದ ಅವರು ಬೆಳಗ್ಗೆ  ಎಚ್ಚರಗೊಳ್ಳದ ಕಾರಣ ಮನೆಯವರು ನೋಡಿದಾಗ  ಸಾವನ್ನಪ್ಪಿರುವುದು ಕಂಡು ಬಂದಿದೆ. ಹೃದಯಾಘಾತವೇ ಸಾವಿಗೆ ಕಾರಣ ಎಂದು ಸಂಬಂಧಿಕರು ತಿಳಿಸಿದ್ದಾರೆ. ಅವರು ದಿ. ಚನಿಯ ಮತ್ತು ಚನಿಯಾರು ದಂಪತಿಯ ಪುತ್ರರಾಗಿದ್ದಾರೆ. ಮೃತರು ಪತ್ನಿ ಬಿಂದು. ಮಕ್ಕಳಾದ ಅವಿನಾಶ್ ಮತ್ತು ಸುಷ್ಮಿತಾ. ಒಡಹುಟ್ಟಿದವರಾದ ಮೋಹನ, ಶಂಕರ, ಚಂದ್ರಾವತಿ, ಸುಜಾತ, ನಾಗೇಶ್, ಗೋಪಾಲ, ಅಶೋಕ ಮತ್ತು ಸೋಮಪ್ಪ ಎಂಬಿವರನ್ನಗಲಿದ್ದಾರೆ.

Post a Comment

0 Comments