Ticker

6/recent/ticker-posts

Ad Code

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ : ಬದಿಯಡ್ಕದಲ್ಲಿ ಆಹ್ಲಾದ ಪ್ರದರ್ಶಿಸಿದ ಕಾರ್ಯಕರ್ತೆಯರು

ಬದಿಯಡ್ಕ : ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇತೃತ್ವದ ನೂತನ ಸರಕಾರ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಿದ್ದಕ್ಕಾಗಿ ಯುಡಿಎಫ್  ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ ಮೆರವಣಿಗೆ ನಡೆಸಿದರು. ಬದಿಯಡ್ಕ ಬಸ್ ನಿಲ್ದಾಣ ಪ್ರದೇಶದಿಂದ ಪ್ರಾರಂಭವಾಗಿ ಪಂಚಾಯತ್ ಬಳಿ ಕೊನೆಗೊಂಡಿತು. ಬದಿಯಡ್ಕ ಪಂಚಾಯತ್ ಯುಡಿಎಫ್ ಅಧ್ಯಕ್ಷ ಅನ್ವರ್ ಓಜೋನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ ಮುಖ್ಯ ಭಾಷಣ ಮಾಡಿದರು. ಆಶಾ ಕಾರ್ಯಕರ್ತೆ ಸತ್ಯಭಾಮ ಸ್ವಾಗತಿಸಿ, ಸುಜಾತಾ ಸಿಎಚ್ ವಂದಿಸಿದರು. 

Post a Comment

0 Comments