Ticker

6/recent/ticker-posts

Ad Code

ನೇತಾಜಿ ಬಾಲವೇದಿಕೆ ಮಕ್ಕಳಿಗೆ ಪ್ರಕೃತಿ ರಮಣೀಯ ಪ್ರವಾಸಿ ತಾಣದಲ್ಲಿ ಪ್ರವೃತ್ತಿ ಪರಿಚಯದ ಪಾಠ

 


ಪೆರ್ಲ : ನೇತಾಜಿ ಸಾರ್ವಜನಿಕ ಗ್ರಂಥಾಲಯ ವಾಚನಾ ಕಳರಿ ಸರಣಿ ಕಾರ್ಯಕ್ರಮದಂಗವಾಗಿ ಬಾಲವೇದಿಕೆ ಮಕ್ಕಳು ಪ್ರಕೃತಿ ರಮಣೀಯವಾದ ಬೇಕಲ ಕೋಟೆ ಮತ್ತು ಪರಿಸರ ಪ್ರದೇಶ ಸಂದರ್ಶನ ಮಾಡಿದರು. ಪರಿಸರದ ಮಡಿಲಿನಲ್ಲಿ ಸೇರಿದ ಸಭಾ ಕಾಯ೯ಕ್ರಮವನ್ನು ಲೈಬ್ರರಿ ಕೌನ್ಸಿಲ್ ನ ಅಹಮ್ಮದ್ ಹುಸೈನ್ ಮಾಸ್ತರ್ ಉದ್ಘಾಟಿಸಿ ''ಮಕ್ಕಳಲ್ಲಿ ಸೃಜನಾತ್ಮಕ ಬೆಳವಣಿಗೆ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ. ಗ್ರಂಥಾಲಯದ ವಾಚನಾ ಕಳರಿ ಮೊಡ್ಯುಲ್ ಗಳನ್ನು ಕಳೆದ ಒಂದು ತಿಂಗಳಿನಿಂದ ಆಯೋಜಿಸಿ ಮಕ್ಕಳಿಗೆ ಕಾರ್ಯಾಗಾರವನ್ನು ನಡೆಸಿ ಕೊಡುವುದು ಅಭಿನಂದನೀಯ. ರೀಡಿಂಗ್ ಥಿಯೇಟರ್ ಸಾಧನೆಗಾರರ ಸಂವಾದ ರಂಗಭೂಮಿ, ಚಲನಚಿತ್ರ ನಿರ್ಮಾಣ, ಸಾಹಿತ್ಯ ಕಾರ್ಯಾಗಾರ, ಪುಸ್ತಕ ಓದು ಆಸ್ವಾದನಾ ಟಿಪ್ಪಣಿ, ಮುಂತಾದ ಚಟುವಟಿಕೆಗಳ ಮೌಲ್ಯಯುತ ಉತ್ಪನ್ನಗಳನ್ನು ಕರಗತಗೊಳಿಸಿ ಗ್ರಂಥಾಲಯದ ಜೊತೆಗೆ ಸಂಪರ್ಕ ನಿರಂತರವಾಗಿರಲಿ'' ಎಂದು ನುಡಿದರು. ಜಿಲ್ಲಾ ಲೈಬ್ರರಿ ಸದಸ್ಯ ಸಲಾಹುದ್ದೀನ್ ಮಾಸ್ತರ್ ರವರು ಬೇಕಲ ಕೋಟೆ ಐತಿಹ್ಯ ಪರಂಪರೆಯನ್ನು ತಿಳಿಸಿದರು. ಚರಿತ್ರೆಗಳನ್ನು ತಿಳಿದು ಬೆಳೆಯಬೇಕು ಎಂದು ತಿಳಿಸಿದರು. ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ್ ಉಪಸ್ಥಿತರಿದ್ದರು. ಬಾಲವೇದಿಕೆ ಅಧ್ಯಕ್ಷೆ ತೃಪ್ತಿ ಸ್ವಾಗತಿಸಿದರು. ಮಕ್ಕಳು ಹಾಗೂ ಮಕ್ಕಳ ಹೆತ್ತವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Post a Comment

0 Comments