Ticker

6/recent/ticker-posts

Ad Code

ಪೆರ್ಲದಲ್ಲಿ ಹಿಂದೂ ಯುವಕರ ದಾರಿ ಅಡ್ಡಗಟ್ಟಿ ಕಬ್ಬಿಣದ ರಾಡ್ ನಲ್ಲಿ ಅಕ್ರಮಿಸಿ ಕೊಲೆ ಬೆದರಿಕೆ : ಹತ್ತು ಸಾವಿರ ರೂ. ಅಪಹರಣ ದೂರು

 

ಪೆರ್ಲ : ಪೇಟೆಯ ಪಂಚಾಯತ್ ಕ್ರಾಸ್ ರೋಡ್ ನಲ್ಲಿ ಕೋಲ್ಡ್ ಹೌಸೊಂದಕ್ಕೆ ತೆರಳುತ್ತಿದ್ದ ಇಬ್ಬರು ಯುವಕರನ್ನು ಸ್ಥಳೀಯ ಉದ್ಯಮಿಯಾದ ಸಂಗೀತ ಡ್ರೆಸ್ ಶಾಪ್ ನ‌ ಮಾಲಕ ಮೊಹಮ್ಮದ್ ಆಶ್ರಫ್ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅವಿನಾಶ್ ಪೆರ್ಲ ಹಾಗೂ ಗಣೇಶ ಬೆದ್ರಂಪಳ್ಳ ಎಂಬಿಬ್ಬರ ಮೇಲೆ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಲಾಗಿತ್ತು.ಈ ಸಂದರ್ಭ ಇವರ ಕೈಯಲ್ಲಿದ್ದ ಹತ್ತು ಸಾವಿರ ರೂ ನಗದು  ಅಪಹರಿಸಲಾಗಿತ್ತು ಎಂದು ದೂರಲಾಗಿದೆ. ಪ್ರಕರಣದಲ್ಲಿ ತೀವ್ರ ಗಾಯಗೊಂಡ ಅವಿನಾಶ್ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು. ಬದಿಯಡ್ಕ ಪೋಲಿಸರಿಗೆ ದೂರು ನೀಡಲಾಗಿದೆ.

Post a Comment

0 Comments