ಕಾಸರಗೋಡು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯದ ದೂರಿನ ಮೇರೆಗೆ ಮೇಲ್ಪರಂಬ ಪೊಲೀಸರು ಮಹಿಳೆಯೋರ್ವೆಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ 16 ವರ್ಷದ ಬಾಲಕನೊಬ್ಬ ನೀಡಿದ ದೂರಿನ ಮೇರೆಗೆ 36 ವರ್ಷದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರುದಾರನಿಗೆ ಈಗ 19 ವರ್ಷ. ಈತ 16 ವರ್ಷದವನಿದ್ದಾಗ ಆಟೋದಲ್ಲಿ ಮತ್ತು ಮಹಿಳೆಯ ಮಲಗುವ ಕೋಣೆಯಲ್ಲಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಏಪ್ರಿಲ್ 2024 ರಲ್ಲಿ ತಿರೂರಿಗೆ ರೈಲು ಪ್ರಯಾಣದ ಸಮಯದಲ್ಲಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ದೂರುದಾರ ತಿಳಿಸಿದ್ದಾನೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

0 Comments