ಕುಂಬ್ಡಾಜೆ : ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ನವೀಕರಿಸಿದ ಭಂಡಾರ ಮನೆಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು 2026 ಮೇ 24, 25, 26 ರಂದು ಜರಗಲಿರುವುದು. ಕಾರ್ಯಕ್ರಮದ ಅಂಗವಾಗಿ ಮೇ. 19 ರಂದು ಗೊನೆಮುಹೂರ್ತ ನಡೆಯಿತು. ಮೇ.23 ಶನಿವಾರ ಸಾಯಂಕಾಲ 7 ಕ್ಕೆ ಕುತ್ತಿಪೂಜೆ, 24 ಆದಿತ್ಯವಾರ ಸಾಯಂಕಾಲ 5ಕ್ಕೆ ತಂತ್ರಿಗಳ ಆಗಮನ, ಪೂರ್ಣ ಕುಂಭ ಸ್ವಾಗತ, 7 ರಿಂದ ಪುಣ್ಯಾಹ ವಾಚನ, ಸ್ಥಳ ಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, 25 ರಂದು ಪೂರ್ವಾಹ್ನ 4.30 ರಿಂದ ಗಣಪತಿ ಹೋಮ, 5.25 ರಿಂದ 7.10 ರ ಶುಭ ಮುಹೂರ್ತದಲ್ಲಿ ಗೃಹಪ್ರವೇಶ, 7 ರಿಂದ ಬ್ರಹ್ಮಕಲಶ ಪೂಜೆ, 11.52 ರಿಂದ 1.10 ರ ವರೆಗಿನ ಮುಹೂರ್ತದಲ್ಲಿ ಶ್ರೀ ಧೂಮಾವತಿ, ಶ್ರೀ ವಿಷ್ಣುಮೂರ್ತಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, 26 ಮಂಗಳವಾರ ಅನ್ನಸಂತರ್ಪಣೆ, ಪೂರ್ವಾಹ್ನ 11.48 ರಿಂದ 1.08 ರ ವರೆಗಿನ ಮುಹೂರ್ತದಲ್ಲಿ ಶ್ರೀಕ್ಷೇತ್ರ ಆಚಾರ ಸ್ಥಾನಿಕರ ಉಪಸ್ಥಿತಿಯಲ್ಲಿ ಅನಿಲ್ ಬೆಳ್ಚಪ್ಪಾಡ ಪೊಡಿಪ್ಪಳ್ಳ, ಗಂಗಾಧರ ಬೆಳ್ಚಪ್ಪಾಡ ನಾರಂಪಾಡಿ ಇವರ ಕಾರ್ಮಿಕತ್ವದಲ್ಲಿ ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಟ್ ಕುಲವನ್, ಕೊರತ್ತಿಯಮ್ಮ ದೈವಗಳ ಪ್ರತಿಷ್ಠೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ 6.30 ಕ್ಕೆ ದೀಪಾರಾಧನೆ, 7 ರಿಂದ ಪುತ್ತರಿ ಮಹೋತ್ಸವ ಇರುವುದು.
ಕಾರ್ಯಕ್ರಮದ ಅಂಗವಾಗಿ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ಮೇ. 24 ಆದಿತ್ಯವಾರ ಸಾಯಂಕಾಲ 3 ಗಂಟೆಗೆ ಕ್ಷೇತ್ರ ಪರಿಸರದಿಂದ ಹೊರಡಲಿದೆ

0 Comments