ಪೆರ್ಲ : ಎಣ್ಮಕಜೆ ಪಂಚಾಯತಿನ ಬುಡಕಟ್ಟು ವಿಸ್ತರಣಾ ಕಚೇರಿ ನೇತೃತ್ವದಲ್ಲಿ ಎಣ್ಮಕಜೆ ಕೊರಗ ಉನ್ನತಿಯಲ್ಲಿ ಮಳೆಗಾಲ ಪೂರ್ವ ಶುಚೀಕರಣ ಅಭಿಯಾನವನ್ನು ನಡೆಸಲಾಯಿತು. ಹರಿತ ಕರ್ಮ ಸೇನೆಯ ಸದಸ್ಯರಾದ ಲಲಿತಾ, ಪ್ರೇಮಲತಾ, ಹೆಲ್ತ್ ಇನ್ಸ್ ಪೆಕ್ಟರ್ ಬಾಬುರಾಜ್ ಉನ್ನತಿಯ ಕುಟುಂಬಗಳು ಮತ್ತು ಕುಟುಂಬಶ್ರೀ ಕಾರ್ಯಕರ್ತೆಯರು ಈ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಹರಿತಕರ್ಮ ಸೇನೆಗೆ ಪ್ಲಾಸ್ಟಿಕ್‌ಗಳನ್ನು ಹಸ್ತಾಂತರಿಸುವ ಅಗತ್ಯತೆಯ ಬಗ್ಗೆ ಉನ್ನತಿವಾಸಿಗಳಿಗೆ ಜಾಗೃತಿ ಮೂಡಿಸಲಾಯಿತು.

0 Comments