Ticker

6/recent/ticker-posts

Ad Code

ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಹೊಳೆಗಿಳಿದಿದ್ದ ವಿದ್ಯಾರ್ಥಿ ನೀರು ಪಾಲು

 

ಪುತ್ತೂರು : ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಹೊಳೆಗಿಳಿದಿದ್ದ ವಿದ್ಯಾರ್ಥೊಯೋರ್ವ ನೀರು ಪಾಲಾದ ದುರ್ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಹೊಳೆಯಲ್ಲಿ ನಡೆದಿದೆ. ನಿನ್ನೆ ಸಂಜೆ ಹೊಳೆಗಿಳಿದ ವಿದ್ಯಾರ್ಥಿಯು  ಕಣ್ಮರೆಯಾಗಿದ್ದು, ಬಳಿಕ  ಮೃತದೇಹ ಪತ್ತೆಯಾಗಿದೆ.

ಮೃತ ವಿದ್ಯಾರ್ಥಿಯನ್ನು ಪುತ್ತೂರಿನ ವಿವೇಕಾನಂದ ಫಾರ್ಮಾಸ್ಯುಟಿಕಲ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಕಿರಣ್‌ ಎಂದು ಗುರುತಿಸಲಾಗಿದೆ. ಗದಗ ಮೂಲದವರಾಗಿರುವ ಕಿರಣ್ ಕಲ್ಲಡ್ಕದಲ್ಲಿ ವಾಸ್ತವ್ಯ ಹೊಂದಿದ್ದರು ಎಂದು ತಿಳಿದುಬಂದಿದೆ. ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಹೊಳೆಗಿಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ.

Post a Comment

0 Comments