ಕುಂಬಳೆ : ಕರ್ನಾಟಕ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಅನುಮತಿ ಹೊಂದಿದ್ದ 1.35 ಲೀಟರ್ ಮದ್ಯವನ್ನು ಅಕ್ರಮವಾಗಿ ಕೈವಶವಿರಿಸಿದ್ದ ಆರೋಪದ ಮೇಲೆ ಓರ್ವನನ್ನು ಬಂಧಿಸಲಾಗಿದೆ.
ಮಂಜೇಶ್ವರ ತಾಲೂಕಿನ ಕಡಂಬಾರ್ ಗ್ರಾಮದ ಅಂಗಡಿಪದವು ಪ್ರದೇಶದಲ್ಲಿ ಇಂದು ಬೆಳಿಗ್ಗೆ 6.45ರ ಸುಮಾರಿಗೆ ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅನಿಲ್ ಕುಮಾರ್ ಬಿ.ಎಂ. ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಅಬಕಾರಿ ಇಲಾಖೆಯ ಮಾಹಿತಿಯಂತೆ, ಬಂಧಿತ ಅನಿಲ್ ಕುಮಾರ್ ವಿರುದ್ಧ ಈಗಾಗಲೇ ಐದು ವಿವಿಧ ಪ್ರಕರಣಗಳು ದಾಖಲಾಗಿವೆ. ಕುಂಬಳೆ ರೇಂಜ್ ಸಹಾಯಕ ಅಬಕಾರಿ ಇನ್ಸ್‌ಪೆಕ್ಟರ್ ಬಿ. ಅಬ್ದುಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಅಬಕಾರಿ ಅಧಿಕಾರಿಗಳಾದ ಜಿತಿನ್ ವಿ., ಪ್ರಜಿತ್ ಪಿ., ಕಣ್ಣನ್ ಕುಂಞಿ ಹಾಗೂ ಚಾಲಕ ಕ್ರಿಸ್ಟೀನ್ ಪಿ.ಎ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

0 Comments