ಪ್ರಿಯರೇ,
ನವ ವಿದ್ಯುನ್ಮಾನ ಮಾಧ್ಯಮ ಲೋಕದಲ್ಲಿ ತನ್ನದೇ ಆದ ವಿಶೇಷ ಹೆಜ್ಜೆಯೊಂದಿಗೆ ಪಾದರ್ಪಣೆಗೈದಿರುವ "ವಿಶೇಷ ಚಾನೆಲ್ " ಎಂಬ ಜಾಲ ತಾಣವು ವೈವಿಧ್ಯಮಯ ಸುದ್ದಿ ಮಾಹಿತಿ,ವೈಶಿಷ್ಟಮಯ ಅಂಕಣಗಳಿಗೆ ಪ್ರಾಮುಖ್ಯತೆ ನೀಡಿ ಕಾರ‍್ಯಚರಿಸುತ್ತಿದೆ.
ಆರಂಭವಾದ ಅಂದಿನಿಂದ ಇಂದಿನ ವರೆಗೆ ಫೆಸ್ಬುಕ್, ವಾಟ್ಸಫ್, ಟ್ವಿಟರ್ , ಯೂಟ್ಯೂಬ್, ಇನ್ ಸ್ಟಾ ಗ್ರಾಂ ಹೀಗೆ ವಿವಿಧ ನವ ವಿದ್ಯುನ್ಮಾನ ಮೂಲಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಓದುಗರನ್ನು ಗಳಿಸಿಕೊಂಡಿದೆ. ಪ್ರತಿದಿನ ಸರಾಸರಿ ಸಾವಿರಾರು ಓದುಗರು ಈ ಜಾಲತಾಣವನ್ನು ಸಂದರ್ಶಿಸುತ್ತಿದ್ದು ದಿನೇ ದಿನೇ ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದೆ.
ಕಾಸರಗೋಡು,ದ.ಕ.,ಉಡುಪಿ,ಕೊಡಗು ಜಿಲ್ಲೆ ಹೀಗೆ ಸಮಗ್ರ ತುಳುನಾಡಿನ ಸ್ಥಳೀಯ ವಿಶೇಷತೆಗೆ ಪ್ರಾಧಾನ್ಯತೆ ಕಲ್ಪಿಸಿಕೊಡುತ್ತಿರುವ ಈ ಮಾಧ್ಯಮ ಸಶಕ್ತ ನಿರ್ವಹಣಾ ಸಮಿತಿ ಹಾಗೂ ಸೂಕ್ತ ಸಲಹೆಗಾರರ ಆಧೀನತೆಯಲ್ಲಿ ಕಾರ‍್ಯಚರಿಸುತ್ತಿದೆ.
"ನಮ್ಮ ಬೆರಳಂಚಿನಲ್ಲಿ ನಮ್ಮೂರ ವಿಶೇಷತೆ" ಎಂಬ ಆಶಯದಂತೆ ಸುದ್ದಿ-ಮಾಹಿತಿ-ವಿಶೇಷಣಗಳನ್ನು ಬಿಂಬಿಸುತ್ತಿದೆ.
ಎಲ್ಲಾ ಮಾಧ್ಯಮಗಳಂತೆ ಈ ಜಾಲತಾಣಕ್ಕೂ ನಿಮ್ಮ ಹಾಗೂ ಸಂಘ ಸಂಸ್ಥೆಗಳ ಜಾಹೀರಾತಿನ ಪ್ರೋತ್ಸಾಹ ಅಗತ್ಯವಾಗಿದೆ.
ನಮ್ಮ ಸುತ್ತ ಮುತ್ತಲ ಪರಿಸರದ ಆಗು ಹೋಗುಗಳ ಬಗ್ಗೆ ಪ್ರಜ್ಞಾವಂತಿಕೆಯ ತುಡಿತ ಉಳ್ಳಂತಹ ಸಹೃದಯರು ನೀವಾಗಿರುವುದರಿಂದ
ವಿಶೇಷ ಚಾನೆಲ್ ಡಾಟ್ ಕಾಮ್ ನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಾಯ ಸಹಕಾರ ನೀಡಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.
ಸಂಪಾದಕೀಯ ಹಾಗೂ ಆಡಳಿತ ಸಮಿತಿ -
ವಿಶೇಷ ಚಾನೆಲ್
ಅದ್ವಿತಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್
ವಿರಾಟ್ ಕಾಂಪ್ಲೆಕ್ಸ್, ಮೈನ್ ರೋಡ್ ಉಕ್ಕಿನಡ್ಕ - ಕಾಸರಗೋಡು 671552
0 Comments