ಪೆರ್ಲ : ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದ ನಲ್ಕ ನಿವಾಸಿ ವಿವೇಕಾನಂದ ಆಚಾರ್ಯ (56) ರವಿವಾರ (ಇಂದು) ಮುಂಜಾನೆ 4 ಗಂಟೆಯ ವೇಳೆಗೆ ಮನೆಗೆ ಮರಳಿದ್ದಾರೆಂದು ಮನೆಯವರು ತಿಳಿಸಿದ್ದಾರೆ.
ಬಡಗಿ ವೃತ್ತಿಗೈಯುತ್ತಿದ್ದ ಇವರು ಮಾನಸಿಕವಾಗಿ ಖಿನ್ನತೆಯನ್ನು ಹೊಂದಿದ್ದು, ಮನೆಯಲ್ಲಿ ಬೆಳಗ್ಗೆ ಚಾ ಕುಡಿಯುವ ತಯಾರಿಯ ನಡುವೆ ಕಾಣೆಯಾಗಿದ್ದರು. ವಿಟ್ಲ ಭಾಗಕ್ಕೆ ಬಸ್ಸಿನಲ್ಲಿ ತೆರಳುವುದನ್ನು ಕಂಡವರಿದ್ದು ಬಳಿಕ ವಿಟ್ಲ,ಉಪ್ಪಿನಂಗಡಿ ಪುತ್ತೂರು ಮೊದಲಾದೆಡೆ ಹುಡುಕಾಟ ನಡೆಸಲಾಗಿತ್ತು. ಈ ಬಗ್ಗೆ ಬದಿಯಡ್ಕ ಪೋಲಿಸರಿಗೆ ಮಾಹಿತಿ ನೀಡಲಾಗಿದ್ದು ಎರಡು ದಿನ ಹುಡುಕಾಟ ನಡೆಸಿದ ಬಳಿಕ ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು. ಈ ನಡುವೆ ಇಂದು ಬೆಳಗ್ಗೆ ವಿವೇಕಾನಂದ ಆಚಾರ್ಯರು ಮರಳಿದ್ದು ಇವರಿಗೆ ಹಿಂದಿನ ಯಾವುದೇ ಘಟನೆ ನೆನಪಿಲ್ಲದಂತೆ ವರ್ತಿಸುತ್ತಿದ್ದಾರೆಂದು ಮನೆಯವರು ತಿಳಿಸಿದ್ದಾರೆ.

0 Comments