Ticker

6/recent/ticker-posts

Ad Code

ಕೇರಳ ವಿಧಾನಸಭಾ ಕ್ಷೇತ್ರ ಬಿಜೆಪಿ ಸೀಟು ಹಂಚಿಕೆ ಪೂರ್ಣ : ಘೋಷಣೆಗೆ ರಾಷ್ಟ್ರೀಯ ನಾಯಕತ್ವಕ್ಕೆ ಅಧಿಕಾರ


ತಿರುವನಂತಪುರ : ವಿಧಾನ ಸಭಾ ಕ್ಷೇತ್ರ ಚುನಾವಣೆಗೆ  ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪೂರ್ಣ ಪ್ರಮಾಣಕ್ಕೆ ಬಂದಿದ್ದು  ಘೋಷಣೆ ವಿಚಾರದಲ್ಲಿ ರಾಷ್ಟ್ರೀಯ ನಾಯಕತ್ವಕ್ಕೆ ಅಧಿಕಾರ ನೀಡಲಾಗಿದೆ ಎಂಬ ಸೂಚನೆ ಲಭಿಸಿದೆ. ಪರಿಗಣಿತ ಅಭ್ಯರ್ಥಿಗಳು ಆ ಕ್ಷೇತ್ರಗಳಲ್ಲಿ ಸಕ್ರಿಯರಾಗುವಂತೆಯೂ ಸೂಚಿಸಲಾಗಿದೆ.ಇದರಂತೆ ಕಾಸರಗೋಡಿನಲ್ಲಿ ಎಂಎಲ್ ಅಶ್ವಿನಿ ಮತ್ತು ಮಂಜೇಶ್ವರದಲ್ಲಿ ಕೆ ಸುರೇಂದ್ರನ್ ನೇಮಂ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಕಜಕೂಟಂನಲ್ಲಿ ವಿ.ಮುರಳೀಧರನ್, ಕಟ್ಟಕಡದಲ್ಲಿ ಪಿ.ಕೆ.ಕೃಷ್ಣದಾಸ್, ಪಾಲದಲ್ಲಿ ಶಾನ್ ಜಾರ್ಜ್, ತಿರುವಲ್ಲಾದಲ್ಲಿ ಅನೂಪ್ ಆಂಟೋನಿ ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಪರೋಕ್ಷ ಪ್ರಚಾರ ಚುರುಕುಗೊಳಿಸಿದ್ದಾರೆ ವಟ್ಟಿಯೂರುಕಾವಿನಲ್ಲಿ ಆರ್.ಶ್ರೀಲೇಖಾ ಅಭ್ಯರ್ಥಿ ಎಂಬ ಪರಿಗಣನೆಯಿದ್ದು, ರಾಷ್ಟ್ರೀಯ ನಾಯಕತ್ವದಿಂದ ನಿರ್ಧಾರ ತಿಳಿಸಲಾಗುವುದು ಎಂದು ತಿಳಿಸಲಾಗಿದೆ. ತಿರುವನಂತಪುರ ಕ್ಷೇತ್ರಕ್ಕೆ ಕರಮನಾ ಜಯನ್ ಮತ್ತು ಚೆಂಗಲ್ ರಾಜಶೇಖರನ್ ನಾಯರ್ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ. ಚೆಂಗನ್ನೂರಿನಲ್ಲಿ ಸಂದೀಪ್ ವಾಚಸ್ಪತಿ ಮತ್ತು ಆರನ್ಮುಲಾದಲ್ಲಿ ಕುಮ್ಮನಂ ರಾಜಶೇಖರನ್ ಕಣಕ್ಕಿಳಿಸುವ ಸಾಧ್ಯತೆ ಇದೆ. ಶೋಭಾ ಸುರೇಂದ್ರನ್ ಅವರಿಗೆ ಕಾಯಂಕುಳಂ ಅಥವಾ ಪಾಲಕ್ಕಾಡ್ ಎಂದು ಪರಿಗಣಿಸಲಾಗಿದೆ.  ಪಿ.ಸುಧೀರ್ ಕೂಡ ಅಟಿಂಗಲ್ ನಲ್ಲಿ ಸ್ಪರ್ಧಿಸಬಹುದು. ಎರ್ನಾಕುಲಂನ ತ್ರಿಪುನಿತುರಾ ಮತ್ತು ಆಲುವಾದಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಜಿಲ್ಲೆಯಲ್ಲಿ ಕೆಲವು ಸ್ಥಾನಗಳನ್ನು ಟ್ವೆಂಟಿ-20ಗೆ ನೀಡಲಾಗುವುದು. ಎಂ.ಟಿ.ರಮೇಶ್ ಅವರನ್ನು ತ್ರಿಶೂರ್ ನಲ್ಲಿ ಮೊದಲು ಪರಿಗಣಿಸಲಾಗಿತ್ತು. ಬೇರೆಯವರು ಅನಿರೀಕ್ಷಿತ ಅಭ್ಯರ್ಥಿಯಾಗಿ ಬರುವ ಸಾಧ್ಯತೆಯೂ ಇದೆ. ಎನ್‌ಡಿಎ ನಾಯಕರಾದ ತುಷಾರ್ ವೆಲ್ಲಪ್ಪಲ್ಲಿ ಮತ್ತು ಸಾಬು ಜೇಕಬ್ ಸ್ಪರ್ಧಿಸುವ ಬಗ್ಗೆ ರಾಷ್ಟ್ರೀಯ ನಾಯಕತ್ವದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ನಾಯಕತ್ವ ತಿಳಿಸಿದೆ.

Post a Comment

0 Comments