ಮುಳ್ಳೇರಿಯ : ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಕರ್ನಾಟಕ ಮತ್ತು ಕೇರಳದ ಕನ್ನಡ ಭಾಷಾ ಪಠ್ಯಪುಸ್ತಕಗಳ ತೌಲನಿಕ ಅಧ್ಯಯನ (ಪ್ರೌಢಶಾಲಾ ಪಠ್ಯಪುಸ್ತಕಗಳನ್ನು ಅನುಲಕ್ಷಿಸಿ) ವಿಷಯದ ಕುರಿತಾಗಿ ಮಹಾಪ್ರಬಂಧವನ್ನು ಮಂಡಿಸಿದ ಯತೀಶ್ ಕುಮಾರ್ ರೈ ಮುಳ್ಳೇರಿಯಾ ಇವರು ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಡಾ.ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ಸಂಶೋಧನಾ ವಿದ್ಯಾರ್ಥಿಯಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಕೆ ಇವರ ಮಾರ್ಗದರ್ಶನದಲ್ಲಿ ಅಧ್ಯಯನವನ್ನು ಕೈಗೊಂಡಿದ್ದರು. ಇವರು ಎಸ್.ಎಸ್.ಎ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿಯಾಗಿ, ಡಯಟ್ ಪ್ರಾಧ್ಯಾಪಕ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಮತ್ತು ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಕಲಾವಿದನಾಗಿ,ನಾಟಕ ನಟನಾಗಿ, ನಿರ್ದೇಶಕನಾಗಿ,ಪ್ರಚನಗಾರನಾಗಿ, ಉದ್ಘೋಷಕನಾಗಿ ತಮ್ಮ ಸ್ವರ ಗಾಂಭೀರ್ಯತೆಯಿಂದ ಗುರುತಿಸಿಕೊಂಡಿರುವ ಯತೀಶ್ ಕುಮಾರ್ ರೈ ಬಹುಮುಖಿ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.

0 Comments