Ticker

6/recent/ticker-posts

Ad Code

ಕಹಿ ಬೆಳವಣಿಗೆಗೆ ಮನನೊಂದು ಕೊಡುಗೈ ದಾನಗಳಿಗೆ ವಿರಾಮ ಘೋಷಿಸಿದ ಡಾ. ಕನ್ಯಾನ ಸದಾಶಿವ ಶೆಟ್ಟಿ


 ಇನ್ನು ಸದಾಶಿವ ಶೆಟ್ಟಿ ಸೇವಾ ಬಳಗದ ಮೂಲಕ ವೈದ್ಯಕೀಯ ಅಗತ್ಯ ಸಹಕಾರ ಮಾತ್ರ....

ಮಂಜೇಶ್ವರ : ಕೊಡುಗೈ ದಾನಗಳಿಗೆ ವಿರಾಮ ಹಾಡಿದ ತುಳುನಾಡಿನ ಖ್ಯಾತ ಉದ್ಯಮಿ ಹಾಗೂ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜ ಸೇವಾ ಚಟುವಟಿಕೆಗಳಿಂದ ದೂರ ಸರಿಯಲು ನಿರ್ಧರಿಸಿರುದಾಗಿ ಹೇಳಿಕೆ ಪ್ರಕಟಿಸಿರುವುದು  ಕರಾವಳಿ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಗಡಿನಾಡದ ಮಂಜೇಶ್ವರ ಸಮೀಪದ  ಕುಳೂರು ಕನ್ಯಾನದ ಪ್ರತಿಷ್ಢಿತ ಮನೆತನದ ಸದಾಶಿವ ಶೆಟ್ಟಿ ಅವರು  ಮುಂಬಯಿಯಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಕಳೆದ ಆರು ವರ್ಷಗಳಿಂದ ತಮ್ಮ ಜಿಲ್ಲೆಯ ಬಡವರ ಮತ್ತು ಸಂಘ-ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸುತ್ತಿದ್ದ ಅವರು, ಇತ್ತೀಚಿನ ಕೆಲವು ಕಹಿ ಬೆಳವಣಿಗೆಗಳಿಂದ ತೀವ್ರ ಮನನೊಂದು ಈ ಭಾವುಕ ನಿರ್ಧಾರಕ್ಕೆ ಬಂದಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ತಾವು ಸಮಾಜ ಸೇವೆಗಾಗಿ ವಿನಿಯೋಗಿಸುತ್ತಿದ್ದ ಶಕ್ತಿ ಮತ್ತು ಸಂಪನ್ಮೂಲಕ್ಕೆ ಪ್ರತಿಯಾಗಿ ಬೆತ್ತ ಕೊಟ್ಟು ಪೆಟ್ಟು ತಿಂದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿವಾದದ ಅಲೆ ಎದ್ದಿರುವುದು   ಜಾಗತಿಕ ಬಂಟರ ಸಂಘದ ಲೆಕ್ಕಪತ್ರಗಳ ವಿಷಯದಿಂದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಸಂಘಕ್ಕೆ ನೀಡಿದ ದೇಣಿಗೆ ಮತ್ತು ಅಲ್ಲಿನ ಆರ್ಥಿಕ ವ್ಯವಹಾರಗಳ ಬಗ್ಗೆ ಪಾರದರ್ಶಕತೆ ಬಯಸಿ ಪ್ರಶ್ನೆ ಕೇಳಿದ್ದಕ್ಕೆ, ತಮ್ಮ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಡಾ. ಕನ್ಯಾನ ವಿಷಾದ ವ್ಯಕ್ತಪಡಿಸಿದರು.

 ಫೆಬ್ರವರಿ 14ರಿಂದ ಜಾರಿಗೆ ಬರುವಂತೆ ಅವರು ಸಂಘ-ಸಂಸ್ಥೆಗಳಿಗೆ ನೀಡುತ್ತಿದ್ದ ಎಲ್ಲಾ ದೇಣಿಗೆ ವಾಗ್ದಾನಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದು  ಮುಂಬಯಿನಲ್ಲಿ ಹಮ್ಮಿಕೊಳ್ಳಲಾಗಿದ್ದ ದಾನಿಗಳ ಸಭೆಗೆ ಸಂಬಂಧಿಸಿದಂತೆ ಕಾನೂನು ನೋಟಿಸ್‌ ಜಾರಿ ಮಾಡಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಸಂದೇಶಗಳನ್ನು ಹರಡುತ್ತಿರುವುದು ಅವರ ನೆಮ್ಮದಿಯನ್ನು ಕಸಿದುಕೊಂಡಿದೆ. ಈ ಕುರಿತು ಈಗಾಗಲೇ  ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದ್ದು, ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ. ಸಂಘಟನೆಗಳ ಮೂಲಕ ನೀಡುವ ದೊಡ್ಡ ಮಟ್ಟದ ಸಹಾಯಕ್ಕೆ ಅಲ್ಪವಿರಾಮ ಹಾಕಿದರೂ, ಡಾ. ಕನ್ಯಾನ ಅವರು ತಮ್ಮ ಮಾನವೀಯತೆಯ ಸಹಕಾರವನ್ನು ತಮ್ಮ ಹೆಸರಿನಲ್ಲಿ ಮಂಜೇಶ್ವರದಲ್ಲಿರುವ ಸದಾಶಿವ ಶೆಟ್ಟಿ ಸೇವಾ ಬಳಗದ ಮೂಲಕ ಅಗತ್ಯ ವೈದ್ಯಕೀಯ ಸೇವೆಯನ್ನು ಮುಂದುವರಿಸಿರುವುದಾಗಿ ತಿಳಿಸಿದ್ದಾರೆ.

ವೈಯಕ್ತಿಕವಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರುಈ ಸಂಸ್ಥೆಯ ಮೂಲಕ ಅಪೇಕ್ಷೆಪಟ್ಟಲ್ಲಿ  ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಅಥವಾ ತುರ್ತು ವೈದ್ಯಕೀಯ ನೆರವು ಬೇಕಾದವರ ಅರ್ಜಿಗಳನ್ನು ಪರಿಶೀಲಿಸಿ, ನೇರವಾಗಿ ಸಹಾಯ ಮಾಡುವುದನ್ನು ಮುಂದುವರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

Post a Comment

0 Comments