ನೀರ್ಚಾಲು ; ಮುಂಡಿತ್ತಡ್ಕ, ಪಳ್ಳಂ, ಪಾಡಲಡ್ಕ ಪರಿಸರ ಪ್ರದೇಶಗಳಲ್ಲಿ ರಾತ್ರಿ ವೇಳೆ ಹುಲಿ ಕಾಣುತ್ತಿರುವುದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹರಡುತ್ತಿದೆ. ಇದು ವದಂತಿಯೋ, ನಿಜವೋ ಎಂದು ಪರೀಕ್ಷಿಸಲು ಫಾರೆಸ್ಟ್ ಆಫೀಸರ್ ಗಳು ಪರಿಸರ ಪ್ರದೇಶಗಳಲ್ಲಿ ನಾಗರಿಕರ ಮಾಹಿತಿ ಮೇರೆಗೆ ಹುಡುಕಾಡಿದರು. ಯಾವುದೇ ಸುಳಿವು ಕಂಡು ಬಂದಿಲ್ಲ. ಅರಿಯಪ್ಪಾಡಿ, ಕುಡ್ಪಂಗುಯಿ ಪರಿಸರ ಪ್ರದೇಶಗಳಲ್ಲಿ ಕಂಡು ಬಂದಿರುವುದಾಗಿ ಮಾಹಿತಿ ಹರಡಲಾಗಿದೆ. ರಾತ್ರಿ ವೇಳೆ ಕಾರ್ಯಕ್ರಮಕ್ಕೆ ಹೋದವರು ಹಿಂತಿರುಗುವಾಗ ಹುಲಿ ಕಂಡಿರುವುದಾಗಿ ವದಂತಿ ಇದ್ದು ರಾತ್ರಿ ವೇಳೆ ಯಾರು ಮನೆಯಿಂದ ಹೊರಗಿಳಿಯದಂತೆ ಕೆಲವು ವಾಟ್ಸಪ್ ಆಡಿಯೋ ಸಂದೇಶಗಳು, ಒಂದು ಚಿತ್ರವನ್ನು ಹರಡಲಾಗಿದೆ. ಪರಿಸರದ ಸಾಕು ಪ್ರಾಣಿಗಳು ಕಾಣೆಯಾಗುತ್ತಿದ್ದು ಹುಲಿಗೆ ಬಲಿಯಾಗಿರಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇಲ್ಲಿನ ಹುಲಿ ಇರುವ ಪ್ರದೇಶವೆಂದು ನಾಗರಿಕರು ಸೂಚಿಸಿದ ಬಾಂಡಿಲ್ ಎಂಬಲ್ಲಿನ ಗುಹೆಯೊಂದನ್ನು ಹಾಗೂ ಪರಿಸರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ ಫಾರೆಸ್ಟ್ ಅಧಿಕೃತರು ಅಗತ್ಯ ಕಂಡು ಬಂದಲ್ಲಿ ಕ್ಯಾಮಾರ ಕಣ್ಗಾವಲು ಏರ್ಪಡಿಸುವುದಾಗಿ ತಿಳಿಸಿದ್ದು, ನಾಗರಿಕರು ಆತಂಕಿತರಾಗಬೇಕಿಲ್ಲ ಎಂದಿದ್ದಾರೆ.

0 Comments