ಅಂಗಡಿಮೊಗರು : ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವ ಫೆ.14, 15 ಆದಿತ್ಯವಾರ ಮತ್ತು 16ನೇ ಸೋಮವಾರಗಳಂದು ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದೊಡಗೂಡಿ ಬಹು ವಿಜೃಂಭಣೆಯಿಂದ ಜರಗಲಿದೆ. ಇದರ ಅಂಗವಾಗಿ ಇಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ರಾತ್ರಿ 7 ಗಂಟೆಗೆ ನಾಟ್ಯ ಶಿವ ನೃತ್ಯ ಶಾಲೆ ಕಾಸರಗೋಡು ಇದರ ಸುಜಾತ ಸುದೀಶ್ ಅಶ್ವಿನಿನಗರ ಇವರ ಶಿಷ್ಯೆಯರು ಮತ್ತು ಊರ ಪ್ರತಿಭೆಗಳಿಂದ ನೃತ್ಯ ವೈಭವ, ರಾತ್ರಿ ಗಂಟೆ 8.00ಕ್ಕೆ ಅತ್ತಾಳಪೂಜೆ, ರಂಗಪೂಜೆ, ರಾತ್ರಿ ಗಂಟೆ 9.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 10.ರಿಂದ ನೃತ್ಯ ವೈವಿಧ್ಯ ಮುಂದುವರಿಯುವುದು, ರಾತ್ರಿ ಗಂಟೆ 11.00ಕ್ಕೆ : ನವಚೇತನ ಯೂತ್ ಕ್ಲಬ್(ರಿ) ಬಾಡೂರು ಇವರಿಂದ ದಿನಕರ ಭಂಡಾರಿ ವಿರಚಿತ "ಮದಿಮೆದ ಇಲ್ಲಡ್..." ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಫೆ. 15ಕ್ಕೆ ಬೆಳಿಗ್ಗೆ 6.00 ಗಂಟೆಗೆ ರುದ್ರಾಭಿಷೇಕ, ಪ್ರಾತಃ ಪೂಜೆ, 9.30ಕ್ಕೆ ಭಜನೆ. ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ದೇಲಂಪಾಡಿ, 11 ಗಂಟೆಗೆ ನವಕಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6.30ಕ್ಕೆ ದೀಪಾರಾಧನೆ, ತಾಯಂಬಕ, 7.30ಕ್ಕೆ ಕ್ಷೇತ್ರ ಮಹಿಳಾ ಸಮಿತಿ ಸದಸ್ಯೆಯರಿಂದ ತಿರುವಾದಿರ, ರಾತ್ರಿ 8.00ಕ್ಕೆ ಮಹಾಪೂಜೆ, ರಾತ್ರಿ 8.30ಕ್ಕೆ ದೇವರ ರಾಜಾಂಗಣ ಪ್ರವೇಶ, ನೃತ್ಯ ಬಲಿ, ರಾತ್ರಿ 10.00ಕ್ಕೆ ಸಿಡಿಮದ್ದು ಪ್ರದರ್ಶನ. ಫೆ. 16ಕ್ಕೆ ಬೆಳಿಗ್ಗೆ 7.00ಕ್ಕೆ ಉಷಃ ಪೂಜೆ 9.30ಕ್ಕೆ ಶ್ರೀ ದೇವರ ರಾಜಾಂಗಣ ಪ್ರವೇಶ ದರ್ಶನ ಬಲಿ, ರಾಜಾಂಗಣ ಪ್ರಸಾದ ಮಧ್ಯಾಹ್ನ 12.30ರಿಂದ ಮಹಾ ಪೂಜೆ, ಪರಿವಾರ ದೈವಗಳಿಗೆ ತಂಬಿಲ, ಮಂತ್ರಾಕ್ಷತೆ ಪ್ರಸಾದ ಭೋಜನದೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.

0 Comments