Ticker

6/recent/ticker-posts

Ad Code

ರಬ್ಬರ್ ಟ್ಯಾಪಿಂಗ್ ಕಾರ್ಮಿಕನ ಮೃತದೇಹ ರಸ್ತೆ ಬದಿ ಪತ್ತೆ

 

ಮುಳ್ಳೇರಿಯ: ರಬ್ಬರ್ ಟ್ಯಾಪಿಂಗ್ ಕಾರ್ಮಿಕನೋರ್ವನ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಬೆಳ್ಳೂರು ಕಿನ್ನಿಂಗಾರು ಬಳಿಯ ಕಾಯಿಮಲೆ ನಿವಾಸಿ ಸುಂದರ ಎಂಬವರ ಪುತ್ರ ರಮೇಶ(45) ಮೃತ ವ್ಯಕ್ತಿ. ಕಾರಡ್ಕದ ನಡುವಂಗಡಿ ರಸ್ತೆ ಬದಿಯಲ್ಲಿ ನಿನ್ನೆ ರಾತ್ರಿ ಮೃತದೇಹ ಪತ್ತೆಯಾಯಿತು. ನಾಗರಿಕರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಾಗಲೇ ಮರಣ ಸಂಭವಿಸಿತ್ತು. ಇವರು ಕಾರಡ್ಕದಲ್ಲಿ ಟ್ಯಾಪಿಂಗ್ ಕೇಲಸದಲ್ಲಿ ನಿರತರಾಗಿದ್ದರು. ಆದೂರು ಪೊಲೀಸರು ಅಸಹಜ ಮರಣಕ್ಕೆ ಪ್ರಕರಣ ದಾಖಲಿಸಿದ್ದಾರೆ. ಮೃತರ ಪತ್ನಿ  ಲೀಲ ಈ ಮೊದಲೇ ಮೃತಪಟ್ಟಿದ್ದು, ಇಬ್ಬರು ಮಕ್ಕಳನ್ನಗಲಿದ್ದಾರೆ.

Post a Comment

0 Comments