Ticker

6/recent/ticker-posts

Ad Code

ಪೈಟಿಂಗ್ ಕೆಲಸದ ನಡುವೆ ಎರಡನೇ ಮಹಡಿಯಿಂದ ಬಿದ್ದ ಯುವಕ ದಾರುಣ ಮೃತ್ಯು

ಪೆರ್ಮುದೆ : ಪೈಟಿಂಗ್ ಕೆಲಸದ ನಡುವೆ ಮನೆಯೊಂದರ ಎರಡನೇ ಮಹಡಿಯಿಂದ ಬಿದ್ದು ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಪೆರ್ಮುದೆಯಲ್ಲಿ ನಡೆದಿದೆ. ಪೆರ್ಮುದೆಯ ರಾಮಚಂದ್ರ ಎಂಬವರ ಮನೆಯ ಎರಡನೇ ಮಹಡಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ನಿವಾಸಿ ಶಂಶಾದ್ (30) ಮೃತಪಟ್ಟ ವ್ಯಕ್ತಿ. ಅವರು ಮನೆಯ ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ  ಜಾರಿ ಬಿದ್ದರು. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Post a Comment

0 Comments