ಕುಂಬಳೆ: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ಚಿಕ್ಕಪ್ಪನ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎರಿಯಾಲ್ ಆಶಿಕಾ ಮಂಜಿಲ್‌ನ ಸುಹೈಲ್ ಸಿಎ (36) ವಿರುದ್ಧ ಕೇಸು ದಾಖಲಿಸಲಾಗಿದೆ. ಬುಧವಾರ, ಎಸ್‌ಐ ಅನಂತಕೃಷ್ಣನ್, ಎಎಸ್‌ಐ ಅತುಲ್ ರಾಮ್ ಮತ್ತು ಸುದೀಪ್ ನೇತೃತ್ವದಲ್ಲಿ ಗಸ್ತು ತಿರುಗುತ್ತಿದ್ದಾಗ, 17 ವರ್ಷದ ಬಾಲಕನೋರ್ವ ಮೊಗ್ರಾಲ್‌ನಿಂದ ಕುಂಬಳೆಗೆ ಸ್ಕೂಟರ್ ಸವಾರಿ ಮಾಡುತ್ತಿದ್ದುದು ಗಮನಕ್ಕೆ ಬಂದಿತ್ತು. ನಂತರದ ನಡೆದ ಹುಡುಕಾಟದಲ್ಲಿ ಸ್ಕೂಟರ್ ಅನ್ನು ಎರಿಯಾಲ್ ಆಶಿಕಾ ಮಂಜಿಲ್‌ನ ಅವನ ಚಿಕ್ಕಪ್ಪ ಸುಹೈಲ್ ಅವನಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಇದರ ನಂತರ, ಪೊಲೀಸರು ಅವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

0 Comments