ಕಾಸರಗೋಡು: ಸಾಮಾಜಿಕ ಮಾಧ್ಯಮಗಳಾದ ಇನ್ ಸ್ಟಾ ಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ಜನಪ್ರಿಯಳಾಗಿದ್ದ ಚಿನ್ನುಪಾಪು ಅಲಿಯಾಸ್ ರೇಷ್ಮಾ (25)ರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದ ಬಾಡಿಗೆ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುತ್ತಿದ್ದ ಇವರು ಮಧ್ಯಾಹ್ವ ವೇಳೆಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಇವರು ಇತ್ತೀಚಿನ ದಿನಗಳಿಂದ ತನ್ನ ಸ್ನೇಹಿತ ಸಂದೇಶ್ ಜೊತೆ ಆಜಾದ್ ನಗರದಲ್ಲಿ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದರು. ಕಳೆದ ದಿನ ಇವರಿಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.ಇದೀಗ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ರೇಷ್ಮಾ ಅವರು ಮೂಲತಃ ಅಡೂರು ಅಲೆಂತಡ್ಕ ನಿವಾಸಿ. ಚುರುಕಿನ ಮಾತು ಹಾಗೂ ನಟನೆಯ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಅಪಾರ ವೀಕ್ಷಕರನ್ನು ಹೊಂದಿದ್ದರು.

0 Comments