ಬದಿಯಡ್ಕ ; ಬಿಜೆಪಿ ಚೆಂಗಳ ಬೂತ್ ಸಮ್ಮೇಳನವು ನೆಕ್ರಾಜೆ ಮಾಧವ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೋಝಿಕ್ಕೋಡು ವಲಯ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಕಾಸರಗೋಡು ಅವರು ಉದ್ಘಾಟಿಸಿದರು. ಸಭೆಯ ಅಧ್ಯಕ್ಷರಾಗಿ ಚೈತ್ರೇಶ್ ಭಟ್ ಹಾಗು ವೇದಿಕೆಯಲ್ಲಿ ಬಿಜೆಪಿ ನೇತಾರರಾದ, ಸುಧಾಮ ಗೋಸಾಡ, ಗೋಪಾಲ ಕೃಷ್ಣ ಮುಂಡೋಲುಮೂಲೆ, ಹರೀಶ್ ನಾರಂಪಾಡಿ ಪಾಲ್ಗೊಂಡರು. ಕಾರ್ಯಕ್ರಮ ದ ಭಾಗವಾಗಿ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಬೂತ್ ಸೆಕ್ರಟರಿ ದೇವಿಪ್ರಸಾದ ನೆಕ್ರಾಜೆ ನಿರೂಪಿಸಿ, ನವೀನ್ ಬಲ್ಲಾಳ್ ವಂದಿಸಿದರು.

0 Comments