Ticker

6/recent/ticker-posts

Ad Code

ಮಣಿಯಂಪಾರೆಯಲ್ಲಿ ಗಲ್ಫ್ ಉದ್ಯೋಗಿಯ ಬೀಗ ಹಾಕಿದ ಮನೆಯಿಂದ ಕಳವು : ಆರು ಗಂಟೆಗಳೊಳಗೆ ನಡೆದ ಕಳವು ಕೃತ್ಯ


ಪೆರ್ಲ :  ಮಣಿಯಂಪಾರೆಯಲ್ಲಿರುವ ಗಲ್ಫ್ ಉದ್ಯೋಗಿಯೋರ್ವರ ಮನೆಯಿಂದ  ಬೆರಳೆಣಿಕೆಯ ತಾಸಿನಲ್ಲಿ ಕಳವು ನಡೆದಿದ್ದು ಭಾರೀ ಕುತೂಹಲ ಸೃಷ್ಟಿಸಿದೆ. ಮಣಿಯಂಪಾರೆ

ಸೈಂಟ್ ಲಾರೆನ್ಸ್ ಚರ್ಚಿನ ಮುಂಭಾಗದಲ್ಲಿ ದೇರಡ್ಕ ಭಾಗಕ್ಕೆ  ಹೋಗುವ ರಸ್ರೆ ಬದಿಯ ಮೊಹಮ್ಮದ್ ಎಂಬವ್ ಮನೆಯಲ್ಲಾಗಿದೆ ಇಂದು ಸಂಜೆಯ ವೇಳೆಗೆ ಕಳವು ನಡೆದಿರುವುದು. ವಿದೇಶದಲ್ಲಿ ಉದ್ಯೋಗಿಯಾಗಿರುವ ಮೊಹಮ್ಮದ್ ವಾರಗಳ ಹಿಂದೆ ಊರಿಗೆ ಮರಳಿದ್ದು ಇಂದು ಮಧ್ಯಾಹ್ನ 2.30 ಗಂಟೆಯ ವೇಳೆಗೆ ಇವರು ಪತ್ನಿ ಸಹಿತ ಸುಳ್ಯದ ಬಂಧುವೊಬ್ಬರ ಮನೆಗೆ ತೆರಳಿದ್ದರು. ಮರಳಿ 8.30ಗಂಟೆಗೆ ಮನೆಗೆ ಬಂದ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಎದುರು ಬಾಗಿಲಿನ‌ ಬೀಗ ಮುರಿದ ಕಳ್ಳರು ಮನೆಯೊಳಗೆ ಇರುವ ಡ್ರೆಸ್ ನ ಬೀರು, ಗೋಡ್ರೆಜ್ ,ಮರದ ಟೇಬಲ್ ನ ಡ್ರವರ್ ಸಹಿತ ವಿವಿದೆಡೆಗಳಲ್ಲಿ ಹಣ, ನಗದಿಗಾಗಿ ಜಾಲಾಡಿದ್ದು ಕಂಡು ಬರುತ್ತದೆ. ಮನೆಯ ಸುತ್ತ ಮೂರು ಭಾಗದಲ್ಲಿ ಎತ್ತರದ ಕೌಂಪೌಂಡು ನಿರ್ಮಿಸಿದ್ದರೂ ಹಿಂದೆ ಮಾತ್ರ ತಗ್ಗಿನ ಕೌಂಪೌಂಡು ಹಾರಿ ಕಳ್ಳರು ಒಳ ಪ್ರವೇಶಿಸಿದ ಕುರುಹು ಲಭ್ಯವಾಗಿದೆ.

ಎದುರುನ ಬಾಗಿಲು ಮುರಿದ ಕಳ್ಳರು ಮನೆಯವರು ಬರುವ ವೇಳೆಯ ವರೆಗೆ‌ ಮನೆಯೊಳಗಿದ್ದು ಕಾರಿನ ಶಬ್ದ ಕೇಳಿದಾಗ ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ. ಮನೆಯೊಳಗಿನಿಂದ 2 ಪವನ್ ಚಿನ್ನ ಮತ್ತು 250 ಧರಮ್ಸ್ ವಿದೇಶಿ ಹಣ ಕಳವು ಹೋಗಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಚಿನ್ನಾಭರಣಗಳನ್ನು ನೆಂಟರ ಮನೆಗೆ ಹೋಗುವಾಗ ಹಾಕಿಕೊಂಡು ಹೋದ ಕಾರಣ ಹೆಚ್ಚಿನ‌ ನಗದು ಕಳವಾಗಿಲ್ಲವೆಂದು ದೃಢಿಕರಿಸಲಾಗಿದೆ.


 ಕಳ್ಳರು ಒಳ ನುಗ್ಗಿದ ಹಲವು ಕುರುಹುಗಳು ಪತ್ತೆಯಾಗಿದ್ದು ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಪೋಲಿಸ್ ಶ್ವಾನ‌ದಳ ತಪಾಸಣೆ ನಡೆಸಲಿದೆ. ಈ ಭಾಗದಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು ತಿಂಗಳ ಹಿಂದೆ ಮಣಿಯಂಪಾರೆಯ ಅಂಗಡಿಯ ಸಮೀಪ ನಿಲ್ಲಿಸಿದ್ದ ಸ್ಕೂಟಿಯೊಂದರಿಂದ 70 ಸಾವಿರ ರೂ ಕಳವು ನಡೆದಿತ್ತು.ಕಳೆದ ವಾರವಷ್ಟೆ ಇದೇ ಮನೆಯ ಮುಂಭಾಗದಲ್ಲಿದ್ದ ಚರ್ಚಿನ ಕಾಣಿಕೆ ಡಬ್ಬಿಯ ಬೀಗ ಮುರಿದ ಕಳ್ಳರು ದೋಚಿದ್ದರು. ಇದೀಗ ವಾರಗಳ ಅಂತರದಲ್ಲಿ ಮತ್ತೊಂದು ಕಳವು ಪ್ರಕರಣ ನಡೆದಿರುವುದು ಪರಿಸರವಾಸಿಗಳನ್ನು ಆತಂಕಿತರನ್ನಾಗಿಸಿದೆ.

Post a Comment

0 Comments