'ಕಾಸರಗೋಡು: 48ರ ಹರೆಯದ ಗೃಹಿಣಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಬಗ್ಗೆ ಪೊಲೀಸರು ಕೊನೆಗೂ ಕೇಸು ದಾಖಲಿಸಿಕೊಂಡಿದ್ದಾರೆ. ಇಚ್ಲಂಪಾಡಿ ಶಾಲಾ ಶಿಕ್ಷಕ, ಸಿಪಿಎಂ ಮಾಜಿ ಕುಂಬಳೆ ಏರಿಯಾ ಕಾರ್ಯದರ್ಶಿ ಹಾಗೂ ಪ್ರಸ್ತುತ ಎಣ್ಮಕಜೆ ಪಂಚಾಯತ್ ಸದಸ್ಯ ಎಸ್.ಸುಧಾಕರನ್ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಡಿಜಿಪಿ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಗೃಹಿಣಿ ಕಿರುಕುಳದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠ ಹಾಗೂ ಡಿಜಿಪಿಗೆ ದೂರು ನೀಡಿದ್ದರು. ಆರೋಪದ ಹಿನ್ನೆಲೆಯಲ್ಲಿ ಸುಧಾಕರನ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಈ ನಡುವೆ ಸುಧಾಕರ ಮಾಸ್ತರ್ ಮಹಿಳೆಯೊಂದಿಗೆ ಆಶ್ಲೀಲವಾಗಿ ಮಾತನಾಡುವ ಆಡಿಯೋವೊಂದು ವೈರಲಾಗಿದ್ದು ಅದರಲ್ಲಿ ಈ ಸಮಯದಲ್ಲಿ ಮಜಾ ಮಾಡುವ ಆಲೋಚನೆಯೊಂದೇ ತನ್ನದೆಂದೂ ಅದಕ್ಕೆ ನೀನು ಸಹಕರಿಸಬೇಕೆಂದು ಒತ್ತಾಯಿಸುವುದು ಕೇಳಿ ಬರುತ್ತಿದೆ. ಮಾತ್ರವಲ್ಲದೆ ನಿವೃತ್ತಿ ಬಳಿಕ ತಾವು ಒಂದಾಗಿ ಜೀವಿಸುವ ಯೋಜನೆಯನ್ನು ವಿವರಿಸಲಾಗಿದ್ದು ಇದಕ್ಕೆ ಯಾರೇ ಅಡ್ಡ ಬಂದರೂ ತಡೆಯುವುದಾಗಿ ಸ್ಪಷ್ಟಪಡಿಸುತ್ತಿರುವ ಆಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲಾಗುತ್ತಿದೆ.
ಸುಧಾಕರ ಮಾಸ್ತರ್ ಅವರು 1995 ರಿಂದ ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೃಹಿಣಿಯೋರ್ವರು ಡಿಜಿಪಿಗೆ ದೂರು ನೀಡಿದ್ದು ತನಗೆ ಮತ್ತು ಅವನ ಕುಟುಂಬಕ್ಕೆ ಕೊಲೆ ಬೆದರಿಕೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣದ ಬಳಿಕ ಆರೋಪಿತ ಮಾಸ್ತರ್ ತಲೆ ಮರೆಸಿಕೊಂಡಿದ್ದಾರೆ.
.jpeg)
0 Comments