Ticker

6/recent/ticker-posts

Ad Code

ವೇಶ್ಯಾವಾಟಿಕೆ ದಂಧೆಯ ಕಿಂಗ್‌ಪಿನ್ ಮಂಗಳೂರಿನ ಭರತ್ ಶೆಟ್ಟಿ ಸಹಿತ 12ಮಂದಿ ಬಂಧನ


 ಮಂಗಳೂರು: ಹಣದಾಸೆಗೆ ತಂದೆಯೇ ತನ್ನ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆ ದಂಧೆಗೆ ನೂಕಿದ ಕ್ರೂರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.ಈ ಘಟನೆಯಲ್ಲಿ ಮಾಂಸ ದಂಧೆಯ 'ಕಿಂಗ್‌ಪಿನ್' ಎಂದೇ ಕರೆಸಿಕೊಳ್ಳುವ ದ.ಕ.ಜಿಲ್ಲೆಯ  ಭರತ್ ಶೆಟ್ಟಿ ಸಹಿತ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯೋರ್ವಳನ್ನು ದಿನಕ್ಕೆ 5 ಸಾವಿರ ರೂಪಾಯಿ ಸಿಗುತ್ತೆ ಅಂತ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಮಂಗಳೂರು ಮೂಲದ  ಭರತ್ ಶೆಟ್ಟಿ ಎಂಬಾತ ತಂದೆ-ಮಗಳೊಡನೆ ಸಲುಗೆ ಬೆಳೆಸಿ, ಆತನನ್ನು  ಮನೆಗೆ ಬಂದು ಇರುವಂತೆಯೂ ತಿಳಿಸಿದ್ದ.

ಇದಕ್ಕೊಪ್ಪಿದ್ದ ತಂದೆ ಮಗಳಿಬ್ಬರೂ ಭರತ್‌ನೊಂದಿಗೆ ಮಂಗಳೂರಿಗೆ ತೆರಳಿದ್ದರು.  ಮರುದಿನ ಭರತ್ ಶೆಟ್ಟಿ ಆಕೆಯ ಬಳಿ ಬಂದು, 4-5 ಜನ ಬರುತ್ತಾರೆ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಒತ್ತಾಯಿಸಿದ್ದನಂತೆ. ನಂತರ 20 ರಿಂದ 45 ವರ್ಷ ವಯಸ್ಸಿನ ನಾಲ್ವರು ಒಬ್ಬರಾದ ಮೇಲೊಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದರು.

ಇದಾದ ಮರುದಿನವೂ ಹುಡುಗಿ ನಿರಾಕರಿಸಿದರೂ ಈ ಕ್ರೂರ ಕೃತ್ಯ ಪುನರಾವರ್ತಿತವಾಯಿತು.ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿ ಕೃತ್ಯಕ್ಕೆ ಕಾರಣಕರ್ತರಾದ ಬಾಲಕಿಯ ತಂದೆ, ಅಜ್ಜಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್‌ಪಿನ್ ಎನ್ನಲಾಗಿರುವ ಭರತ್‌ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧಿತ 8 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Post a Comment

0 Comments