ಬದಿಯಡ್ಕ : ಬಿಜೆಪಿ ಹತ್ತು, ಯುಡಿಎಫ್ ಹತ್ತು ಎಂಬ ಸಮಾನಂತರದಲ್ಲಿದ್ದು ಏಕ ಎಡರಂಗ ಅಭ್ಯರ್ಥಿ ಆಯ್ಕೆಯಾಗಿ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಪದವಿ ಅದೃಷ್ಟದ ಆಟದ ಮೂಲಕ ಬಿಜೆಪಿಯ ಪಾಲಿಗೆ ಒದಗಿದ್ದು 25 ವರ್ಷಗಳ ಕಾಲ ಜನಪ್ರತಿನಿಧಿಯಾಗಿ ಅನುಭವ ಸಂಪನ್ನರಾಗಿದ್ದ ಡಿ. ಶಂಕರರನ್ನು ಬಿಜೆಪಿ ಅಧ್ಯಕ್ಷ ಅಭ್ಯರ್ಥಿಯಾಗಿಸಿತ್ತು.
ಈ ಮಧ್ಯೆ, ಇಂದು ಪಂಚಾಯತ್ ಕಚೇರಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಮೊದಲೇ ತಿಳಿಸಿದಂತೆ, ಸಿಪಿಎಂ ಮತದಾನದಿಂದ ದೂರ ಉಳಿಯಿತು. ಬಳಿಕ ಡ್ರಾದಲ್ಲಿ, ಬಿಜೆಪಿ ಸದಸ್ಯ ಡಿ. ಶಂಕರ ಅವರಿಗೆ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ನೀಡಲಾಯಿತು. ಡಿ. ಶಂಕರ ಪಂಚಾಯತ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಪಂಚಾಯತ್‌ನಲ್ಲಿ ಯುಡಿಎಫ್ ಅಧಿಕಾರದಲ್ಲಿದ್ದು ಈ ಬಾರಿ ಪಂ ಆಡಳಿತ ನಷ್ಟಗೊಂಡಿರುವುದು ಯುಡಿಎಫ್ ಗೆ ಭಾರೀ ಹಿನ್ನಡೆಯಾಗಿದೆ.

0 Comments