Ticker

6/recent/ticker-posts

Ad Code

ಬಂದ್ಯೋಡಿನ ಯುವಕ ದುಬೈ ಬೀಚ್ ನಲ್ಲಿ ಶವವಾಗಿ ಪತ್ತೆಯಾದ ಪ್ರಕರಣದ ನಿಗೂಢತೆ ಭೇದಿಸಲು ಆಗ್ರಹ

 

ಉಪ್ಪಳ : ಬಂದ್ಯೋಡಿನ ಯುವಕ  ದುಬೈ ಬೀಚ್‌ನಲ್ಲಿ ಶವವಾಗಿ ಪತ್ತೆಯಾದ ಪ್ರಕರಣದಲ್ಲಿ  ನಿಗೂಢತೆ ಇದೆ ಎಂದು ಆರೋಪಿಸಿ  ಸಂಬಂಧಿಕರು, ದುಬೈ ಪೊಲೀಸರಲ್ಲಿ ತನಿಖೆಗೆ  ಆಗ್ರಹಿಸಿದ್ದಾರೆ. ಪಂಜತೊಟ್ಟಿಯ ಹಸೈನಾರ್ ಮತ್ತು ಸಫಿಯಾ ದಂಪತಿಗಳ ಏಕೈಕ ಪುತ್ರ ಮುಹಮ್ಮದ್ ಶೆಫೀಕ್ (25) ಮೃತರಾಗಿ ಪತ್ತೆಯಾಗಿದ್ದರು. ಪ್ರಕರಣದಲ್ಲಿ ನಿಗೂಢತೆ ಇದೆ ಎಂದು ಸಂಬಂಧಿಕರು ಹೇಳಿದ್ದಾರೆ. 8 ತಿಂಗಳ ಹಿಂದೆ  ಗಲ್ಫ್‌ಗೆ ತೆರಳಿದ್ದ ಅವರು ದುಬೈನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ದುಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ಬಂದಿರುವುದಾಗಿ  ಸಂಬಂಧಿಕರು ತಿಳಿಸಿದ್ದಾರೆ.

Post a Comment

0 Comments