ಸಾಂದರ್ಭಿಕ ಚಿತ್ರ
ಪೆರ್ಲ: ಪೇಟೆ ಪರಿಸರದಲ್ಲಿ ಅಡ್ಡಾಡುತ್ತಿದ್ದ ಹುಚ್ಚು ನಾಯಿಯೊಂದು ಹಲವರಿಗೆ ಕಚ್ಚಿರುವ ಬಗ್ಗೆ ವರದಿಯಾಗಿದೆ. ಇಂದು ಬೆಳಗ್ಗೆ ಪೆರ್ಲ ಪೇಟೆ ಹಾಗೂ ಕಾಟುಕುಕ್ಕೆಗೆ ತೆರಳುವ ರಸ್ತೆಯಲ್ಲಿ ಹಲವರು ಹುಚ್ಚುನಾಯಿಗಳ ಉಪಟಳಕ್ಕೊಳಗಾಗಿದ್ದಾರೆ. ಈ ಬಗ್ಗೆ ದೂರಲಾಗಿದ್ದು ಹುಚ್ಚು ಪೀಡಿತ ನಾಯಿಯೊಂದನ್ನು ಕೊಂದಿರುವ ಬಗ್ಗೆಯೂ ತಿಳಿದು ಬಂದಿದೆ. ಮಕ್ಕಳು ಮಹಿಳೆಯರ ಸಹಿತ ಪೇಟೆಯಲ್ಲಿ ನಡೆದಾಡುವ ಜನತೆ ಇದೀಗ ಆತಂಕಕ್ಕೊಳಗಾಗಿದ್ದಾರೆ.

0 Comments