ಬದಿಯಡ್ಕ: ತ್ರಿಸ್ತರ ಪಂಚಾಯತ್ ಚುನಾವಣೆಯ ಅಂಗವಾಗಿ ಬಿಜೆಪಿ ಬದಿಯಡ್ಕ ಪಂಚಾಯತ್ ಸಮಿತಿ ಸಿದ್ಧ ಪಡಿಸಿದ ಮುಂದಿನ 5 ವರ್ಷಗಳ ಅಭಿವೃದ್ದಿ ಪ್ರಣಾಳಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅವರು ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಬಿಜೆಪಿ ಚುನಾವಣಾ ಸಮಿತಿ ಅಧ್ಯಕ್ಷ ಜಯರಾಮ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ವಿ.ಶ್ರೀಕೃಷ್ಣ ಭಟ್, ಪಕ್ಷದ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಪಕ್ಷದ ಇತರ ಮುಖಂಡರುಗಳಾದ ಜಿಲ್ಲಾ ಪಂಚಾಯತು ಅಭ್ಯರ್ಥಿ ರಾಮಪ್ಪ ಮಂಜೇಶ್ವರ, ಶಂಕರ ದರ್ಬೆತ್ತಡ್ಕ, ಅಶ್ವಿನಿ ಮೊಳೆಯಾರು, ಪಿ.ರಮೇಶ್, ಮಹೇಶ್ ವಳಕುಂಜ, ಅವಿನಾಶ್ ವಿ.ರೈ ಮೊದಲಾದವರು ಉಪಸ್ಥಿತರಿದ್ದರು. ಕ್ಯಾಂಪ್ಕೊ ಉಪಾಧ್ಯಕ್ಷರಾಗಿ ಆಯ್ಕೆಯಾದ ಪದ್ಮರಾಜ ಪಟ್ಟಾಜೆ ಅವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಡಿ.ಕೆ.ನಾರಾಯಣನ್ ನಾಯರ್ ಸ್ವಾಗತಿಸಿ ಮಹೇಶ್ ವಳಕುಂಜ ವಂದಿಸಿದರು.

0 Comments