ಕಾಸರಗೋಡು : ಕರುಳಿನ ಶಸ್ತ್ರಚಿಕಿತ್ಸೆಗೆ ಅರಿವಳಿಕೆ ಔಷಧ ನೀಡಿ ಆರು ತಿಂಗಳ ಕಾಲ ಪ್ರಜ್ಞಾಹೀನನಾಗಿದ್ದ ಯುವಕ ಮೃತಪಟ್ಟಿದ್ದಾನೆ. ಉದುಮ ಕುಂಡಡ್ಕದ ದಿ.ಮಾಹಿನ್ ಮತ್ತು ಬೀಫಾತಿಮಾ ದಂಪತಿಯ ಪುತ್ರ ಅಲ್ತಾಫ್ (31) ಮೃತಪಟ್ಟ ಯುವಕನಾಗಿದ್ದಾನೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅಲ್ತಾಫ್ ಊರಿಗೆ ಮರಳಿದ್ದು ಆರು ತಿಂಗಳ ಹಿಂದೆ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಗಾಗಿ ಚೆರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆಗಾಗಿ ಅರಿವಳಿಕೆ ಔಷಧಿ ನೀಡಿದ ನಂತರ ಪ್ರಜ್ಞೆ ಮರಳಿ ಪಡೆಯದ ಅಲ್ತಾಫ್ ಆರು ತಿಂಗಳಿನಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ತಂದೆ ಮಂಗಳೂರು ವಿಮಾನ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಮೃತರು ಪತ್ನಿ ನಜಿಲಾ, ಮಕ್ಕಳಾದ ಮರಿಯಮ್ ನಸ್ವಾ, ಹೆಲ್ಮಾ ನಾಜಿಯಾ ಎಂಬಿವರನ್ನಗಲಿದ್ದಾರೆ.

0 Comments