ಕಾಸರಗೋಡು: ದೇಲಂಪಾಡಿ ಪಂಚಾಯತ್ 8 ನೇ ವಾರ್ಡ್‌ನ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಿಪಿಎಂ ಲೋಕಲ್ ಸಮಿತಿ ಕಾರ್ಯದರ್ಶಿ ಮತ್ತು ಪಂಚಾಯತ್ ಸದಸ್ಯ ಎ. ಸುರೇಂದ್ರನ್ ಅವರಿಗೆ ರಿಮಾಂಡ್ ವಿಧಿಸಲಾಗಿದೆ. ಬಿವರೇಜಸ್ ಕಾರ್ಪೊರೇಷನ್ ಬಂದಡ್ಕ ಔಟ್‌ಲೆಟ್‌ನ ಎಲ್‌ಡಿ ಕ್ಲಾಕ್ ಹಾಗೂ ಪ್ರಸ್ತುತ ದೇಲಂಪಾಡಿ ಪಂಚಾಯತಿನ ಪಯರಡ್ಕ ಬೂತ್ ನ ಬಿಎಲ್‌ಒ ಆಗಿರುವ ಪಿ. ಅಜಿತ್ ಅವರ ಮೇಲೆ ಗುರುವಾರ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧನ ನಡೆದಿದೆ. ಪಯರಡ್ಕದಲ್ಲಿ ನಡೆದ ತೀವ್ರ ಮತದಾರರ ಪಟ್ಟಿ ಪರಿಷ್ಕರಣಾ ಶಿಬಿರದ ಸಂದರ್ಭದಲ್ಲಿ ಬಿಎಲ್‌ಒ ಅವರ ಕೆಲಸಕ್ಕೆ ಅಡ್ಡಿಪಡಿಸಿದರು, ಅವರನ್ನು ಕಾಲರ್ ಹಿಡಿದು ಗೋಡೆಗೆ ತಳ್ಳಿ ಹಲ್ಲೆ ನಡೆಸಿ ನಿಂದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ ಅಜಿತ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

0 Comments