Ticker

6/recent/ticker-posts

Ad Code

ಬೈಕಿನಲ್ಲಿ ಸಾಗಿಸುತ್ತಿದ್ದ 26.82 ಗ್ರಾಂ ಎಂಡಿಎಂಎ ವಶ, ಓರ್ವನ ಸೆರೆ


 ಮಂಜೇಶ್ವರ:  ಬೈಕಿನಲ್ಲಿ ಸಾಗಿಸುತ್ತಿದ್ದ 26.82 ಗ್ರಾಂ ಎಂಡಿಎಂಎ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಗ್ರ ಮಂಜೇಶ್ವರ ನಸ್ರಿಯ ಮಂಜಿಲ್ ನಿವಾಸಿ ಅಬೂಬಕರ್ ಆಬಿದು(25) ಬಂಧಿತ ಆರೋಪಿ. ಮಂಜೇಶ್ವರ ಎಸ್.ಐ.ವೈಷ್ಣವ್ ನೇತೃತ್ವದಲ್ಲಿ ಬಂಧನ ನಡೆದಿದೆ. ಇಂದು (ಸೋಮವಾರ) ಮುಂಜಾನೆ 1.45 ರ ವೇಳೆ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ  ಸೇತುವೆ ರಸ್ತೆಯಲ್ಲಿ ಮಾದಕವಸ್ತು ಬೇಟೆ ನಡೆದಿದೆ. ಶಂಕಿತ ರೀತಿಯಲ್ಲಿ ಮದ ಬೈಕ್ ತಡೆದು ನಿಲಗಲಿಸಿ ತಪಾಸಣೆ ನಡೆಸಲಾಯಿತು. ಆರೋಪಿಯ ಫ್ಯಾಂಟಿನ ಕಿಸೆಯಿಂದ ಎಂಡಿಎಂಎ ವಶಪಡಿಸಲಾಗಿದೆ.  ಬಂಧಿತ ಆರೋಪಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂದ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ.

Post a Comment

0 Comments