Ticker

6/recent/ticker-posts

Ad Code

ಸ್ಕೂಟರಿನಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ 8 ವರ್ಷದ ಬಾಲಕ ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು


 ನೀರ್ಚಾಲು: ಸ್ಕೂಟರ್  ನಿಲ್ಲಿಸುವ ಮಧ್ಯೆ  ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ 8 ವರ್ಷ ಪ್ರಾಯದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಉಳಿಯತ್ತಡ್ಕ ಪಳ್ಳಂ ನಿವಾಸಿ ಪ್ರಭಾಕರ- ಅನುಷ ದಂಪತಿಯ ಏಕ ಪುತ್ರ ಪ್ರಣುಷ್(8) ಮೃತಪಟ್ಟ ಬಾಲಕ. ಆತ ನಿನ್ನೆ (ಸೋಮವಾರ) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದನು. ಕಳೆದ ಶುಕ್ರವಾರ ಸಾಯಂಕಾಲ ಬೇಳ ಸಮೀಪದ  ಕಟ್ಟತ್ತಂಗಡಿ ತಿರುವು ಬಳಿ ಘಟನೆ ನಡೆದಿತ್ತು. ತಿರುವಿನಲ್ಲಿ ಮುಂಭಾಗದಿಂದ ವಾಹನ ಬರುತ್ತಿರುವುದನ್ನು ಕಂಡು ಪ್ರಭಾಕರ ಅವರು ಸ್ಕೂಟರನ್ನು  ಬ್ರೇಕ್ ಹಾಕಿ ನಿಲ್ಲಿಸಿದ್ದು ಈ ವೇಳೆ ಪ್ರಣುಷ್ ರಸ್ತೆಗೆಸೆಯಲ್ಪಟ್ಟನೆನ್ನಲಾಗಿದೆ. ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ  ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಕೊನೆಯುಸಿರೆಳೆದನು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು

Post a Comment

0 Comments