Ticker

6/recent/ticker-posts

Ad Code

ಸೀತಾಂಗೋಳಿಯಲ್ಲಿ ಬದಿಯಡ್ಕದ ಯುವಕನ ಮೇಲೆ ತಂಡ ದಾಳಿ, ಮಾರಣಾಂತಿಕ ಇರಿತ


 ಸೀತಾಂಗೋಳಿ: ಬದಿಯಡ್ಕ ನಿವಾಸಿ ಮೀನು ವ್ಯಾಪಾರಿ ಯುವಕನಿಗೆ ಸೀತಾಂಗೋಳಿಯಲ್ಲಿ ತಂಡವೊಂದು‌ ಮಾರಣಾಂತಿಕವಾಗಿ ಇರಿದ ಘಟನೆ ನಡೆದಿದೆ. ಬದಿಯಡ್ಕ ಬಳಿಯ ವಳಮಲೆ ನಿವಾಸಿ ಅನಿಲ್ ಕುಟ್ಟನ್ ಅವರನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ (ಆದಿತ್ಯವಾರ) ರಾತ್ರಿ 11.30 ರ ವೇಳೆ ಸೀತಾಂಗೋಳಿ ಪೇಟೆಯಲ್ಲಿ ಈ ಘಟನೆ ನಡೆದಿದೆ.‌ಮಹೇಶ್ ನೇತೃತ್ವದ ತಂಡ ಇರಿದಿರುವುದಾಗಿ ಅನಿಲ್ ಕುಟ್ಟನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಹಲವರನ್ನು ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕುಂಬಳೆ ಪೊಲೀಸರು ಹೇಳಿದ್ದಾರೆ. ಅನಿಲ್ ಕುಟ್ಟನ್ ಅವರಿಗೆ ಮಂಗಳೂರು ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ತುರ್ತು ಶಸ್ತ್ರಕ್ರಿಯೆ ನಡೆಸಲಾಗಿದೆ

Post a Comment

0 Comments