Ticker

6/recent/ticker-posts

Ad Code

ಸೀತಾಂಗೋಳಿ ಪೇಟೆಯಲ್ಲಿ ಬದಿಯಡ್ಕದ ಅನಿಲ್ ಕುಟ್ಟನಿಗೆ ಇರಿದ ಪ್ರಕರಣ; ಮುಖ್ಯ ಆರೋಪಿ ಬೇಳ ಚೌಕಾರು ನಿವಾಸಿ ಅಕ್ಷಯ್ ಬಂಧನ


 ಕುಂಬಳೆ: ಸೀತಾಂಗೋಳಿ ಪೇಟೆಯಲ್ಲಿ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಯಾನೆ ಕುಟ್ಟನ ಮೇಲೆ ಮಾರಣಾಂತಿಕವಾಗಿ ಇರಿದ ಪ್ರಕರಣದಲ್ಲಿ 13 ಮಂದಿಯ ವಿರುದ್ದ ನರಹತ್ಯಾ ಪ್ರಕರಣ ದಾಖಲಿಸಿರುವ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬೇಳ ಚೌಕಾರು ನಿವಾಸಿ ಅಕ್ಷಯ್ (34) ಬಂಧಿತ ಆರೋಪಿ. ಈತನನ್ನು ಚೌಕಾರು ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

    ಆದಿತ್ಯವಾರ ರಾತ್ರಿ 12 ಗಂಟೆಯ ವೇಳೆ ಸೀತಾಂಗೋಳಿಯಲ್ಲಿ ಈ ಘಟನೆ ನಡೆದಿತ್ತು. ಹಣಕಾಸು ವಿಷಯದಲ್ಲಿ ತಂಡವೊಂದು ಸೀತಾಂಗೋಳಿಯ ಹೋಟೆಲ್ ಒಂದರಲ್ಲಿ ಬಂದು ನಿರಂತರ ಕಿರುಕುಳ ನೀಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಕುಟ್ಟ ಸೀತಾಂಗೋಳಿಗೆ ಹೋಗಿದ್ದರು.  ಕುಟ್ಟ ಬರುವುದನ್ನು ಕಾದು ನಿಂತ ತಂಡ ಆತನ ಕುತ್ತಿಗೆಗೆ ಇರಿದಿತ್ತು. ಗಂಭೀರ ಗಾಯಗೊಂಡ ಕುಟ್ಡನಿಗೆ  ನಿನ್ನೆ (ಸೋಮವಾರ) ತುರ್ತು ಶಸ್ತ್ರಕ್ರಿಯೆ ನಡೆಸಲಾಗಿತ್ತು

Post a Comment

0 Comments