Ticker

6/recent/ticker-posts

Ad Code

ಪೆರ್ಲದ ವಾಹನ ಚಾಲಕ ಕುಂಬಳೆಯಲ್ಲಿ ರೈಲಿಗೆ ತಲೆಯೊಡ್ಡಿ ಆತ್ಯಹತ್ಯೆ


ಕುಂಬಳೆ : ರೈಲ್ವೆ ಹಳಿಯಲ್ಲಿ ಯುವಕನೊರ್ವನ ಮೃತದೇಹ ರೈಲಿಗೆ ತಲೆ ಒಡ್ಡಿದ ಸ್ಥಿತಿಯಲ್ಲಿ ಇಂದು ಸಂಜೆ ಕಂಡು ಬಂದಿದೆ. ಮೃತ ವ್ಯಕ್ತಿ ಪೆರ್ಲದಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಟುಕುಕ್ಕೆ ಸಮೀಪ ಸೂರ್ಡೇಲು ನಿವಾಸಿ ದಿ.ಶೀನಪ್ಪ ರೈಗಳ ಪುತ್ರ ತಾರನಾಥ ರೈ (46) ಎಂದು ಗುರುತಿಸಲಾಗಿದೆ. ಈ ಹಿಂದೆ ಪೆರ್ಲದಲ್ಲಿ ಬಾಡಿಗೆ ವಾಹನ ಚಲಾಯಿಸುತ್ತಿದ್ದ ಇವರು ಇದೀಗ ಸ್ಪಲ್ಪ ಸಮಯಗಳ ಹಿಂದೆ ತನ್ನ ವಾಹನಗಳನ್ನು ಮಾರಿದ್ದು ಬಳಿಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದು ಬಂದಿದೆ ಇಂದು ಮಧ್ಯಾಹ್ನ ಮೇಲೆ ಪೆರ್ಲದಿಂದ ಕುಂಬಳೆಗೆ ತೆರಳಿದ್ದರು. ಮೃತರು ತಾಯಿ ಲೀಲಾವತಿ, ಪತ್ನಿ ಸುಜಾತ ಇಬ್ಬರು ಹೆಣ್ಮಕ್ಕಳು, ಸಹೋದರ ಹರಿ ಪ್ರಸಾದ್, ಸಹೋದರಿ ರಂಜಿನಿ ಎಂಬಿವರನ್ನಗಲಿದ್ದಾರೆ. ಕುಂಬಳೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments