Ticker

6/recent/ticker-posts

Ad Code

ಹರಿತ ಕರ್ಮ ಸೇನೆಯ ಕಾರ್ಯಕರ್ತರಿಂದ ವಂಚನೆ; ನೀರ್ಚಾಲು ಏಣಿಯರ್ಪು ಹನುಮಾನ್ ನಗರದಲ್ಲಿ ನಾಗರಿಕರಿಂದ ಪ್ರತಿಭಟನೆ


 ನೀರ್ಚಾಲು:  ಬದಿಯಡ್ಕ ಪಂಚಾಯತಿನ 17ನೇ ವಾರ್ಡ್ ನ ಹರಿತಕರ್ಮ ಸೇನೆಯ ಕಾರ್ಯಕರ್ತರಾದ ಸೀನತ್ ಹಾಗೂ ಶಾರದಾ   ಸಂಗ್ರಹಿಸಿದ ಹಣ ಲಪಟಾಯಿಸಿ ಭಾರೀ ಭ್ರಷ್ಟಾಚಾರ ಮಾಡಿದ ಬಗ್ಗೆ ಪಂಚಾಯತ್  ಆಡಿಟ್ ನಲ್ಲಿ ವ್ಯಕ್ತವಾಗಿದ್ದು ಈ ಭ್ರಷ್ಟಾಚಾರಿಗಳ ಹಗರಣದ ತನಿಖೆ ಆದಷ್ಟು ಬೇಗ ಕೖಗೆತ್ತಿಕೊಂಡು ಇವರನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ  ಏಣಿಯರ್ಪು ಹನುಮಾನ್ ನಗರದಲ್ಲಿ ನಾಗರಿಕರು  ಪ್ರತಿಭಟನೆ ನಡೆಸಿದರು. ಬ್ಲಾಕ್ ಪಂಚಾಯತು ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಮೊಳೆಯಾರು, ಮಂಡಲ ಕಾರ್ಯದರ್ಶಿ ರಜನಿ ಸಂದೀಪ್,   ವಾರ್ಡು ಸದಸ್ಯೆ ಸ್ವಪ್ನ, ಪುನೀತ್, ಉಮೇಶ ಸಹಿತ ಹಲವರು ನೇತೃತ್ವ ವಹಿಸಿದರು.

Post a Comment

0 Comments