Ticker

6/recent/ticker-posts

Ad Code

ಪೊಡಿಪ್ಪಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಭಂಡಾರ ಮನೆಯ ಹಿರಿಯ ಸದಸ್ಯೆ ಶ್ರೀಮತಿ ಕಲ್ಯಾಣಿ ಅಮ್ಮ ನಿಧನ


 ಕುಂಬ್ಡಾಜೆ: ಪೊಡಿಪ್ಪಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಭಂಡಾರ ಮನೆಯ ಹಿರಿಯ ಸದಸ್ಯೆ, ದಿವಂಗತ ಕಣ್ಣನ್ ಬೆಳ್ಚಪ್ಪಾಡ ಅವರ ಪತ್ನಿ ಕಲ್ಯಾಣಿ ಅಮ್ಮ (92) ನಿಧನರಾದರು. ಮೃತರು ಮಕ್ಕಳಾದ ಅಂಬಾಡಿ ಕಾರ್ನವರ್(ಪೊಡಿಪ್ಪಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರು), ರಾಮ, ಸುಂದರ,ಅಶೋಕ, ಕೃಷ್ಣ, ಸೊಸೆಯಂದಿರಾದ ರಾಜೀವಿ, ಸುಮತಿ, ಬೇಬಿ, ಕಮಲಾಕ್ಷಿ, ಸಹೋದರ ಸಹೋದರಿಯರಾದ  ಕುಟ್ಟಿ, ನಾರಾಯಣ, ಕೃಷ್ಣನ್, ಕಾರ್ತಿಯಾಯಿನಿ, ಕುಞಮ್ಮ, ಜಾನಕಿ ಎಂಬಿವರನ್ನು ಅಗಲಿದ್ದಾರೆ. ಇವರ ಸೊಸೆ (ಕೃಷ್ಣರ ಪತ್ನಿ) ಹರಿಣಾಕ್ಷಿ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು.

Post a Comment

0 Comments