Ticker

6/recent/ticker-posts

Ad Code

ಅಸೌಖ್ಯದಿಂದ ಬಳಲುತ್ತಿದ್ದ ಬಸ್ ಕಂಡೆಕ್ಟರ್ ನಿಧನ


 ನೀರ್ಚಾಲು: ಕಿಡ್ನಿ ಸಂಬಂಧ ಖಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ ‌ಕಂಡೆಕ್ಟರ್ ಮೃತಪಟ್ಟ ಘಟನೆ ‌ನಡೆದಿದೆ. ನೀರ್ಚಾಲು ಬಳಿಯ ಏಣಿಯರ್ಪು ಬುರ್ಡಡ್ಕ ನಡುವೆ ನಿವಾಸಿ ಉದಯ ಕುಮಾರ್(56) ಮೃತಪಟ್ಟವರು. ಇವರು ಕುಂಬಳೆ- ಮುಳ್ಳೇರಿಯ ರೂಟಿನಲ್ಲಿ  ಸಾಗುವ ಗುರುವಾಯೂರಪ್ಪನ್ ಬಸ್ಸಿನಲ್ಲಿ ಕಂಡೆಕ್ಟರ್ ಆಗಿ ದುಡಿಯುತ್ತಿದ್ದರು. ಈ ಹಿಂದೆ ಕಾಸರಗೋಡು- ತಲಪ್ಪಾಡಿ ಬಸ್ಸಿನಲ್ಲೂ ಕಂಡೆಕ್ಟರ್ ಆಗಿದ್ದರು. ಉಸಿರಾಟದ ತೊಂದರೆಯಿಂದಾಗಿ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು (ಮಂಗಳವಾರ) ಮಧ್ಯಾಹ್ನ ಅವರು ಕೊನೆಯುಸಿರೆಳೆದರು. ದಿವಂಗತ ಡ್ರೈವರ್ ಬಾಲಕೃಷ್ಣ ನ್- ಪದ್ಮಾವತಿ ದಂಪತಿಯ‌ ಪುತ್ರರಾದ ಇವರು ತಾಯಿ, ಪತ್ನಿ‌ ಪೂರ್ಣಿಮ, ಮಕ್ಕಳಾದ ಪ್ರಣವ್, ವಿಸ್ಮಯ, ಸಹೋದರ ಸಹೋದರೊಯರಾದ ವಿನೋದ, ನಾರಾಯಣ, ಅಜಿತ್ ಕುಮಾರ್ (ಡ್ರೈವರ್) ಎಂಬಿವರನ್ನು ಅಗಲಿದ್ದಾರೆ

Post a Comment

0 Comments