ಕಾಸರಗೋಡು: ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಳಿಯತ್ತಡ್ಕ ಜಿ.ಕೆ.ನಗರ ಗುವತ್ತಡ್ಕ ನಿವಾಸಿ ವಿನ್ಸೆಂಟ್ ಕ್ರಾಸ್ತರ ಪುತ್ರಿ ಸೌಮ್ಯ ಕ್ರಾಸ್ತ(25) ಮೃತಪಟ್ಟವರು. ಇಂದು(ಸೋಮವಾರ) ಬೆಳಗ್ಗೆ ನಿದ್ದೆಯಿಂದ ಏಳದ ಕಾರಣ ಎಬ್ಬಿಸಲು ಯತ್ನಿಸಿದಾಗ ಏಳದೇ ಇದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದಾಗ ಮೃತಪಟ್ಟಿರುವುದಾಗಿ ಡಾಕ್ಟರುಗಳು ದೃಡೀಕರಿಸಿದ್ದಾರೆ. ಹೃದಯಾಘಾತದಿಂದ ಈಕೆ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ
ಮೃತದೇಹವನ್ನು ಜನರಲ್ ಆಸ್ಪತ್ರೆಯ ಮೋರ್ಚರಿಗೆ ಕೊಂಡೊಯ್ಯಲಾಯಿತು. ಮೃತರು ತಂದೆ, ತಾಯಿ ಫ್ಳೋರ ಕ್ರಾಸ್ತ, ಸಹೋದರ ಸಹೋದರಿಯರಾದ ಸೀವನ್ ಕ್ರಾಸ್ತ, ಅವಿನಾಶ್ ಕ್ರಾಸ್ತ, ರೂಪ ಕ್ರಾಸ್ತ, ಕವಿತ ಕ್ರಾಸ್ತ ಎಂಬಿವರನ್ನು ಅಗಲಿದ್ದಾರೆ
0 Comments