Ticker

6/recent/ticker-posts

Ad Code

ಪಂಚಾಯತ್ ಚುನಾವಣೆ : ಎಣ್ಮಕಜೆಯಲ್ಲಿ 1 ಎಸ್.ಸಿ, 9 ಮಹಿಳೆ,8 ಜನರಲ್ ಮೀಸಲಾತಿ ವಾರ್ಡ್ ನಿರ್ಣಯ


ಪೆರ್ಲ : ಸ್ಥಳೀಯಾಡಳಿತೆ ಚುನಾವಣೆಯ ಮುಂಚಿತವಾಗಿ ವಾರ್ಡುಗಳ ಮೀಸಲಾತಿ ಚೀಟಿ ಎತ್ತುವ ಪ್ರಕ್ರಿಯೆ ಇಂದಿನಿಂದ (ಸೋಮವಾರ) ಆರಂಭಗೊಂಡಿದ್ದು ಎಣ್ಮಕಜೆಯ ಮೀಸಲಾತಿ ವಾರ್ಡ್ ನಿರ್ಣಯಿಸಲಾಯಿತು. ಚುನಾವಣಾ ಆಯೋಗದ ನೇತೃತ್ವದಲ್ಲಿ ನಡೆದ ಚೀಟಿ ಎತ್ತುವಿಕೆಯಲ್ಲಿ 12ನೇ ವಾರ್ಡ್ ಬಜಕೂಡ್ಲು ಪರಿಶಿಷ್ಟ ಜಾತಿ ಮೀಸಲಾತಿಗೆ ಲಭಿಸಿದೆ. ಉಳಿದಂತೆ 9 ವಾರ್ಡ್ ಗಳು ಮಹಿಳಾ ಹಾಗೂ 8 ವಾರ್ಡ್ ಗಳು ಜನರಲ್ (ಸಾಮಾನ್ಯ) ವಿಭಾಗಕ್ಕೆ ಲಭಿಸಿದೆ. 

ಪಂಚಾಯತಿನ 1 ಸಾಯ,4ಕಾಟುಕುಕ್ಕೆ, 5 ಪೆರ್ಲ ನೋರ್ತ್, 6 ಪೆರ್ಲ ಟೌನ್,9 ವಾಣಿನಗರ, 10 ಕಜಂಪಾಡಿ, 15 ಶೇಣಿ, 17 ಬೇಂಗಪದವು ಮಹಿಳಾ ಮೀಸಲಾತಿ ವಾರ್ಡ್ ಗಳಾಗಿದೆ. 2 ಚವರ್ಕಾಡ್, 3 ಬಾಳೆಮೂಲೆ, 7 ಶಿವಗಿರಿ, 8 ಸ್ವರ್ಗ, 13 ಬಣ್ಪುತ್ತಡ್ಕ, 14 ಗುಣಾಜೆ, 16 ಮಣಿಯಂಪಾರೆ, 18 ಅಡ್ಕಸ್ಥಳ ಜನರಲ್ ( ಸಾಮಾನ್ಯ) ವಿಭಾಗಕ್ಕೆ ಲಭಿಸಿದೆ.

Post a Comment

0 Comments