ಕಣ್ಣೂರು: ಸಿಡಿಲು ಬಡಿದು ಕೆಂಪುಕಲ್ಲು ಕೋರೆಯ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ಅಸ್ಸಾಂ ನಿವಾಸಿ ಜೋಸ್ ನೆಸ್ರಿ, ಒರಿಸ್ಸಾ ನಿವಾಸಿ ರಾಜೇಶ್ ಮೃತಪಟ್ಟವರು. ಇಂದು (ಮಂಗಳವಾರ) ಮದ್ಯಾಹ್ನ 2.30 ರ ವೇಳೆ ಕಣ್ಣೂರು ಶ್ರೀಕಂಠಾಪುರಂ ನಿಡಿಯೋಲ್ ಕಾಕಣ್ಣಪಾರದಲ್ಲಿ ಈ ಘಟನೆ ನಡೆದಿದೆ. ಸಿಡಿಲು ಬಡಿದ ಕೂಡಲೇ ಸ್ಥಳೀಯರು ಆಗಮಿಸಿ ಗಾಯಗೊಂಡವರನ್ನು ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ದರು. ದಾರಿ ಮಧೈ ಇಬ್ಬರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಓರ್ವರ ಸ್ಥಿತಿ ಚಿಂತಾಜನಕವಾಗಿದೆ.
ಮಲಪ್ಪುರಂ ಕೊಂಡೋಟ್ಟಿಯಲ್ಲಿ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ.
0 Comments