ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನವಾನ್ನ ಸಮರ್ಪಣೆ ಹಾಗೂ ಬಲಿವಾಡು ಕೂಟ ಅಕ್ಟೋಬರ್ 17 ಶುಕ್ರವಾರದಂದು ಜರಗಲಿರುವುದು. ಈ ಸಂದರ್ಭ ಶ್ರೀ ಕ್ಷೇತ್ರದಲ್ಲಿ ಶಾಶ್ವತ ಪೂಜಾ ಸೇವಾರ್ಥಿಗಳ ಹೆಸರು ನೋಂದಾವಣೆಗಿರುವ "ಶಾಶ್ವತ ಪೂಜಾ ಅಭಿಯಾನ"ಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 11:15 ಕ್ಕೆ ಜರಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಅಧ್ಯಕ್ಷರಾದ ನರಸಿಂಹ ಭಟ್ ಕಾರ್ಮಾರು ವಹಿಸಲಿರುವರು. ಶಾಶ್ವತ ಪೂಜಾ ಯೋಜನೆಯ ಅಭಿಯಾನದ ಉದ್ಘಾಟನೆಯನ್ನು ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಸುಬ್ರಹ್ಮಣ್ಯ ಭಟ್ ಕಾಟಿಪಳ್ಳ ನೆರವೇರಿಸಲಿರುವರು.ಈ ಸಂದರ್ಭದಲ್ಲಿ ಅಶ್ವಿನಿ ಮೊಳೆಯಾರು (ಜನಪ್ರತಿನಿಧಿ, ಕಾಸರಗೋಡು ಬ್ಲಾಕ್ ಪಂಚಾಯತ್), ಶ್ಯಾಮ್ ಪ್ರಸಾದ್ ಮಾನ್ಯ (ಜನಪ್ರತಿನಿಧಿ, ಬದಿಯಡ್ಕ ಗ್ರಾಮ ಪಂಚಾಯತ್) ಕೃಷ್ಣ ಭಟ್ ಕಕ್ಕಳ (ನಿವೃತ್ತ ಅಧ್ಯಾಪಕರು) ರಾಧಾಕೃಷ್ಣ ರೈ ಕಾರ್ಮಾರು (ಆಡಳಿತ ಮೊಕ್ತೇಸರರು) ಮೊದಲಾದವರು ಭಾಗವಹಿಸಲಿರುವರು.
ಭಕ್ತಾದಿಗಳು ಭಾಗವಹಿಸಿ, ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಸಮಿತಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
0 Comments