Ticker

6/recent/ticker-posts

Ad Code

ಸೀತಾಂಗೋಳಿ ಪೇಟೆಯಲ್ಲಿ ಬದಿಯಡ್ಕ ನಿವಾಸಿ ಅನಿಲ್‌ಕುಟ್ಟನಿಗೆ ಇರಿದ ಪ್ತಕರಣ; ನಾಲ್ಕು ಮಂದಿಯ ಸೆರೆ, ಬಂಧಿತರ ಸಂಖೈ 5ಕ್ಕೇರಿಕೆ


 ಕುಂಬಳೆ: ಬದಿಯಡ್ಕ ನಿವಾಸಿ ಅನಿಲ್ ಕುಟ್ಟನಿಗೆ ಸೀತಾಂಗೋಳಿಯಲ್ಲಿ ಮಾರಣಾಂತಿಕವಾಗಿ ಇರಿದ ಪ್ರಕರಣದಲ್ಲಿ  4 ಮಂದಿಯನ್ನು ಬಂಧಿಸಲಾಗಿದೆ. ಕುದ್ರೆಪ್ಪಾಡಿ ಪರಿಸರ ನಿವಾಸಿಗಳಾದ ರಜೀಶ್, ಅಜಿತ್, ಹರಿಪ್ರಸಾದ್,  ಮಹೇಶ್ ಬಂಧಿತ ಆರೋಪಿಗಳು.ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖೈ 5 ಕ್ಕೇರಿದೆ. 8 ಮಂದಿಯ ಬಂಧನ ನಡೆಯಬೇಕಿದೆ. ಈ ಪ್ರಕರಣದ ಮುಖ್ಯ ಆರೋಪಿ ಬೇಳ ಚೌಕಾರು ನಿವಾಸಿ ಅಕ್ಷಯ್ ಎಂಬಾತನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಎ.ಎಸ್.ಪಿ.ಎಂ.ನಂದಗೋಪನ್ ಅವರ ಮೇಲ್ನೋಟದಲ್ಲಿ ಕುಂಬಳೆ ಇನ್ಸ್ಪೆಕ್ಟರ್ ಪಿ.ಕೆ.ಜಿಜೀಶ್ ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧಿಕಾರಿ ಬಿ.ವಿ.ವಿಜಯಭಾರತ್ ರೆಡ್ಡಿ ಅವರ ನೇತೃತ್ವದಲ್ಲಿ ರಚಿಸಿರುವ ಡಾನ್ಸಾಪ್ ತಂಡದ ಸದಸ್ಯರಾದ ಕೆ.ನಾರಾಯಣನ್ ನಾಯರ್, ಬಿ.ವಿ.ಶಾಜು, ಎನ್.ರಾಜೇಶ್, ಸಜೀಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
         ಕಳೆದ ಆದಿತ್ಯವಾರದಂದು ರಾತ್ರಿ 11.30 ರ ವೇಳೆ ಬದಿಯಡ್ಕ ವಳಮಲೆ ನಿವಾಸಿ ಹಾಗೂ ಬದಿಯಡ್ಕ ಪೇಟೆಯಲ್ಲಿ ಮೀನು ವ್ಯಾಪಾರಿಯಾಗಿರುವ ಅನಿಲ್ ಕುಮಾರ್ ಯಾನೆ ಕುಟ್ಟನ್ ನನ್ನು ಸೀತಾಂಗೋಳಿ ಪೇಟೆಯಲ್ಲಿ ಇರಿಯಲಾಗಿತ್ತು. ಹಣಕಾಸಿನ ವಿಷಯದಲ್ಲಿ ಮಾತುಕತೆಗೆಂದು ಹೋಗಿದ್ದ ಕುಟ್ಟನಿಗೆ ತಂಡ ಇರಿದಿದ್ದು ಗಂಭೀರ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕುಟ್ಡನ ಕುತ್ತಿಗೆ ಹಿಂಭಾಗದಲ್ಲಿ ಸಿಲುಕಿದ ಕತ್ತಿಯನ್ನು ಶಸ್ತ್ರಕ್ರಿಯೆ ಮೂಲಕ ತೆಗೆಯಲಾಗಿತ್ತು. ಗಂಭೀರ ಗಾಯಗೊಂಡಿದ್ದ ಕುಟ್ಟ ಇದೀಗ ಚೇತರಿಸುತ್ತಿದ್ದಾರೆ

Post a Comment

0 Comments