ಕುಂಬಳೆ; ಡೆತ್ ನೋಟ್ ಬರೆದಿಟ್ಟು ಯುವ ನ್ಯಾಯವಾದಿ, ಡಿ. ವೈ.ಎಫ್.ಐ.ನೇತಾರೆ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದಲ್ಲಿ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಯುವ ನ್ಯಾಯವಾದಿ ಅಡ್ವಕೇಟ್ ರಂಜಿತ ಆತ್ಮಹತ್ಯೆಗೈದ ಪ್ರಕರಣದಲ್ಲಿ ಇನ್ನೋರ್ವ ವಕೀಲ ತಿರುವಲ್ಲ ನಿವಾಸಿ ಅನಿಲ್ ಕುಮಾರ್ ಬಂಧಿತ ಆರೋಪಿ.ಘಟನೆಯ ನಂತರ ತಲೆ ಮರೆಸಿಕೊಂಡಿದ್ದ ಅನಿಲ್ ಕುಮಾರ್ ನನ್ನು ತಿರುವನಂತಪುರಂನಿಂದ ಬಂಧಿಸಲಾಯಿತು.
ಸೆಪ್ಟೆಂಬರ್ 30 ರಂದು ಸಂಜೆ ರಂಜಿತಳ ಮೃತದೇಹ ವಕೀಲು ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಂಜಿತಾಳ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಪಿಎಂ ಒತ್ತಾಯಿಸಿತ್ತು. ಬಂಧಿತ ಅನಿಲ್ ಕುಮಾರ್ ವಿರುದ್ದ ಆತ್ಮಹತ್ಯೆ ಪ್ರೇರಣೆ ಪ್ರಕರಣ ದಾಖಲಿಸಲಾಗಿದೆ. ಬಂಧಿತನನ್ನು ವಿಚಾರಣೆ ನಡೆಸಲಾಗುತ್ತಿದೆ
0 Comments