Ticker

6/recent/ticker-posts

Ad Code

ಬದಿಯಡ್ಕದಲ್ಲಿ ಕಾರು ಡಿಕ್ಕಿ ಹೊಡೆದು ಪಾದಾಚಾರಿ ಕೃಷಿಕ ಮೃತ್ಯು


 ಬದಿಯಡ್ಕ: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಕೃಷಿಕ ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಸಮೀಪದ ಚೆಂಬಲ್ತಿಮಾರ್ ನಿವಾಸಿ ಗೋಪಾಲಕೃಷ್ಣ ಭಟ್(74) ನಿಧನರಾದ ವ್ಯಕ್ತಿ. ನಿನ್ನೆ (ಮಂಗಳವಾರ) ಸಾಯಂಕಾಲ 7.15 ಕ್ಕೆ ಬದಿಯಡ್ಕ ಬೋಳುಕಟ್ಟೆ ಬಳಿ ಈ ಘಟನೆ ನಡೆದಿದೆ. ಕೆಲಸ ನಿಮಿತ್ತ ಬೋಳುಕಟ್ಟೆ ಭಾಗಕ್ಕೆ ಹೋಗಿದ್ದ ಗೋಪಾಲಕೃಷ್ಣ ಭಟ್, ಮನೆಗೆ ಹಿಂತಿರುಗಲು ರಸ್ತೆ ದಾಟುತ್ತಿದ್ದ ವೇಳೆ ಅಫಘಾತ ಉಂಟಾಗಿದೆ. ಮುಳ್ಳೇರಿಯ ಭಾಗದಿಂದ ಬದಿಯಡ್ಕ ಭಾಗಕ್ಕೆ ಬರುತ್ತಿದ್ದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಗೋಪಾಲಕೃಷ್ಣ ಭಟ್ಟರನ್ನು ಕೂಡಲೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ಆದರೆ ಆ ವೇಳೆ ಅವರು ಮೃತಪಟ್ಟಿದ್ದರು.‌ಮೃತರು ಪತ್ನಿ ವೈಜಯಂತಿ, ಮಕ್ಕಳಾದ ಶ್ರೀ ಲಕ್ಷ್ಮ, ಶ್ರೀ ವಿದ್ಯ, ಅಳಿಯಂದಿರಾದ ಮನುಶರ್ಮ, ವಿನೋದ್ ಕುಮಾರ್, ಸಹೋದರ ಸಹೋದರಿಯರಾದ ಮಹಾಬಲೇಶ್ವರ ಭಟ್, ಗಣರಾಜ ಭಟ್, ರಾಜೇಶ್ವರಿ, ಪುಷ್ಪಲತ, ವಿಜಯ ಲತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು

Post a Comment

0 Comments