ಕುಂಬಳೆ : ಖ್ಯಾತ ಯುವ ನ್ಯಾಯವಾದಿ, ಡಿವೈಎಫ್ಐ ನಾಯಕಿ, ಮಹಿಳಾ ಅಸೋಸಿಯೇಷನ್ ಏರಿಯಾ ಸಮಿತಿ ಅಧ್ಯಕ್ಷೆ, ಕುಂಬಳೆ ನಿವಾಸಿ ರಂಜಿತಾ (34) ಕುಂಬಳೆ ಪೇಟೆಯ ತನ್ನ ಕಛೇರಿಯೊಳಗೆ ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.
ಪೇಟೆಯ ಕೊಟ್ಟೂಡಲ್ ಕಾಂಪ್ಲೆಕ್ಸ್ ಕಟ್ಟಡದ ತನ್ನ ಕಚೇರಿಯನ್ನು ಒಳಗಿಂದ ಬಾಗಿಲು ಜಡಿದು ಆತ್ಮಹತ್ಯೆ ನಡೆಸಿರುವ ಬಗ್ಗೆ ತಿಳಿದು ಬಂದಿದೆ.
ಡಿವೈಎಫ್ಐ ಬ್ಲಾಕ್ ಘಟಕ ಖಜಾಂಜಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದ ಇವರು ಸಿಪಿಐಎಂ ನ ಭರವಸೆಯ ನಾಯಕಿಯಾಗಿದ್ದರು. ಮೃತದೇಹದ ಬಳಿಯಿಂದ ಚೀಟಿ ದೊರೆತಿದ್ದು ತನ್ನ ವೈಯ್ಯಕ್ತಿಕ ಕಾರಣ ಆತ್ಮಹತ್ಯೆಗೆ ಪ್ರೇರಕ ಎಂಬ ಬರಹ ದೊರೆತಿದೆ.
ಇವರ ಸಹೋದರ ಸಕ್ರಿಯ ಸಿಪಿಐ ಎಂ ಕಾರ್ಯಕರ್ತ, ರಿಕ್ಷಾ ಚಾಲಕ ಅಜಿತ್ ನಾಲ್ಕೈದು ವರ್ಷದ ಹಿಂದೆ ನೀರಿಗೆ ಬಿದ್ದ ಮಗುವೊಂದನ್ನು ರಕ್ಷಿಸುವ ವೇಳೆ ಮೃತಪಟ್ಟಿದ್ದನು. ಮೃತಳು ಪತಿ ಮತ್ತು ಮಗುವನ್ನು ಅಗಲಿದ್ದಾಳೆ.
ಮೃತದೇಹ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
0 Comments